ADVERTISEMENT

‘ಸಾಧಿಸುವ ಹಠ, ಛಲ ಇರಲಿ’

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 14:03 IST
Last Updated 9 ಜುಲೈ 2019, 14:03 IST
ಕನಕ‍ಪುರ ಎಕ್ಸ್‌ ಮುನಿಷಿಪಲ್‌ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸೂರ್ಯಕುಮಾರ್‌ ಅವರನ್ನು ಅಭಿನಂದಿಸಲಾಯಿತು
ಕನಕ‍ಪುರ ಎಕ್ಸ್‌ ಮುನಿಷಿಪಲ್‌ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸೂರ್ಯಕುಮಾರ್‌ ಅವರನ್ನು ಅಭಿನಂದಿಸಲಾಯಿತು   

ಕನಕಪುರ: ಓದಿನ ಸಮಯದಲ್ಲಿ ವಿದ್ಯಾರ್ಥಿಗಳು ಬೇರೆಡೆ ಗಮನಹರಿಸಬಾರದು ಎಂದು ಸ್ಪಂದನಾ ಟ್ರಸ್ಟ್‌ ಅಧ್ಯಕ್ಷ ಮುತ್ತಣ್ಣ ಹೇಳಿದರು.

ನಗರದ ಎಕ್ಸ್‌ ಮುನಿಷಿಪಲ್‌ ಕಾಲೇಜಿನಲ್ಲಿ ಬಿಡದಿ ಸ್ಪಂದನಾ ಟ್ರಸ್ಟ್‌ ವತಿಯಿಂದ ಕಾಲೇಜಿನ ಟಾಪರ್‌ ಎಂ.ಸೂರ್ಯಕುಮಾರ್‌ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ₹10ಸಾವಿರ ಧನಸಹಾಯ ನೀಡಿ ಮಾತನಾಡಿದರು.

ತರಗತಿಯಲ್ಲಿ ಎಷ್ಟೇ ವಿದ್ಯಾರ್ಥಿಗಳಿದ್ದರೂ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಮಾತ್ರ ವಿಶೇಷರಾಗುತ್ತಾರೆ. ತರಗತಿಯಲ್ಲಿ ಎಲ್ಲರಿಗೂ ಒಂದೇ ರೀತಿ ಶಿಕ್ಷಣ ಸಿಕ್ಕರೂ ಎಲ್ಲರೂ ಸಾಧನೆ ಮಾಡುವುದಿಲ್ಲ. ಸಾಧಿಸಬೇಕೆಂಬ ಹಠ ಮತ್ತು ಛಲ ಇದ್ದವರು ಮಾತ್ರ ಸಾಧಕರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸ್ಪಂದನಾ ಚಾರಿಟಬಲ್‌ ಟ್ರಸ್ಟ್‌ನ ಪದಾಧಿಕಾರಿಗಳಾದ ಭೈರೇಗೌಡ, ರವಿಕುಮಾರ್‌, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.