ಚನ್ನಪಟ್ಟಣ: ನಗರದ ಸಿಲ್ಕ್ ಫಾರಂ ಬಳಿ ನಿರ್ಮಾಣವಾಗುತ್ತಿರುವ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ಕಟ್ಟಡಕ್ಕೆ ಅಳವಡಿಸಲು ತಂದಿದ್ದ ವಿದ್ಯುತ್ ವೈರ್ ಬಂಡಲ್ ಕಳ್ಳತನ ಮಾಡಿದ ಇಬ್ಬರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬಾಪೂಜಿನಗರದ ನಿವಾಸಿ ಸೈಯದ್ ಸೈಫ್ ಆಲಿಯಾಸ್ ಸೈಫ್ (34), ಬೆಂಗಳೂರು ಚಂದ್ರ ಲೇಔಟ್ ಗಂಗೊಂಡನಹಳ್ಳಿ ನಿವಾಸಿ ಸೈಯದ್ ಮುಜಾಹಿದ್ (32) ಬಂಧಿತ ಆರೋಪಿಗಳು.
ಮೇ 1ರಂದು ರಾತ್ರಿ ಸರಕು ಸಾಗನೆ ವಾಹನ ತಂದು ವೈರ್ ಬಂಡಲ್‌ಗಳನ್ನು ಕದ್ದು ಸಾಗಿಸಿದ್ದರು. ಬಂಧಿತರಿಂದ ₹9ಲಕ್ಷ ಮೌಲ್ಯದ ವೈರ್ ಬಂಡಲ್, ಸರಕು ಸಾಗಣೆ ವಾಹನ ವಶಪಡಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.