ಚನ್ನಪಟ್ಟಣ: ತಾಲ್ಲೂಕಿನ ಪೀಹಳ್ಳಿದೊಡ್ಡಿ ಗ್ರಾಮದ ತೋಟಗಳಿಗೆ ಮಂಗಳವಾರ ರಾತ್ರಿ ನುಗ್ಗಿದ ಕಾಡಾನೆ ಹಿಂಡು ತೆಂಗು, ಅಡಿಕೆ, ಬೇವು, ತೇಗ ಸೇರಿದಂತೆ ಹಲವು ಬೆಳೆಗಳನ್ನು ನಾಶ ಮಾಡಿದೆ.
ತೋಟದಲ್ಲಿ ಪಂಪ್‌ಸೆಟ್‌ಗೆ ಅಳವಡಿಸಿದ್ದ ಪೈಪ್ ಮತ್ತು ಬೇಲಿಯನ್ನು ಧ್ವಂಸ ಮಾಡಿವೆ. ಗ್ರಾಮದ ರೈತರಾದ ಲತಾ ಜಯಣ್ಣ, ಸಚಿನ್ ಗೌಡ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆಸಿದ್ದ 50 ರಿಂದ 60 ತೆಂಗಿನ ಗಿಡ, 50 ಅಡಿಕೆ ಮರ ಹಾಗೂ 20ಕ್ಕೂ ಹೆಚ್ಚು ಬೇವು, ತೇಗದ ಮರಗಳನ್ನು ಕಾಡಾನೆಗಳು ನಾಶ ಪಡಿಸಿವೆ. ₹1 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.