ರಾಮನಗರ: ತಾಲ್ಲೂಕಿನ ವಿಭೂತಿಕೆರೆ ಗ್ರಾಮದ ಜಮೀನಿನಲ್ಲಿ ಕಾಡಾನೆಗಳ ದಾಳಿಯಿಂದಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಎರಡ್ಮೂರು ಆನೆಗಳು ಜಮೀನಿಗೆ ಲಗ್ಗೆ ಇಟ್ಟಿವೆ. ಇದರಿಂದಾಗಿ ಶಿವಯ್ಯ, ರೇಣುಕಾ ಹಾಗೂ ಶಿವರಾಜು ಎಂಬ ರೈತರಿಗೆ ಸೇರಿದ ಜಮೀನಿನಲ್ಲಿ ತೆಂಗಿನಮರ, ಪಪ್ಪಾಯ, ಹಲಸಿನಮರ, ನೀರಾವರಿ ಪರಿಕರಗಳು ನಾಶವಾಗಿವೆ.
ಕಾಡಾನೆಗಳ ಹಿಂಡು ಕಾವೇರಿ ವನ್ಯಜೀವಿಧಾಮದಿಂದ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಆಹಾರಕ್ಕಾಗಿ ಸುತ್ತಮುತ್ತಲಿನ ಗ್ರಾಮಗಳ ಜಮೀನಿಗೆ ಬರುವ ಆನೆಗಳು, ಬೆಳೆಗಳನ್ನು ನಾಶ ಮಾಡುತ್ತಿವೆ. ನೀರಾವರಿ ಸಲಕರಣೆಗಳನ್ನು ದ್ವಂಸ ಮಾಡಿ ಹೋಗುತ್ತಿವೆ. ಇದರಿಂದಾಗಿ ಸ್ಥಳೀಯರು ಜಮೀನಿನಲ್ಲಿ ಆತಂಕದಲ್ಲೇ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.