ADVERTISEMENT

ರಾಮನಗರ: ಸರ್ಕಾರಿ ಆಸ್ಪತ್ರೆಗೆ ಉಪಕರಣ ಸರಬರಾಜು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2021, 3:49 IST
Last Updated 5 ನವೆಂಬರ್ 2021, 3:49 IST
ಮಾಗಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಐಸಿಯು ಘಟಕಕ್ಕೆ ಒದಗಿಸಿರುವ ಉಪಕರಣಗಳ ಬಳಕೆಗೆ ಶಾಸಕ ಎ. ಮಂಜುನಾಥ್‌ ಚಾಲನೆ ನೀಡಿದರು. ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್‌, ನರ್ಸಿಂಗ್‌ ಅಧೀಕ್ಷಕಿ ಪದ್ಮಾ, ಫಾರ್ಮಾಸಿಸ್ಟ್‌ ಗುಣಶೇಖರ್‌, ಜೆಡಿಎಸ್‌ ಮುಖಂಡ ಬಿ.ಆರ್‌. ಗುಡ್ಡೇಗೌಡ ಇದ್ದರು
ಮಾಗಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಐಸಿಯು ಘಟಕಕ್ಕೆ ಒದಗಿಸಿರುವ ಉಪಕರಣಗಳ ಬಳಕೆಗೆ ಶಾಸಕ ಎ. ಮಂಜುನಾಥ್‌ ಚಾಲನೆ ನೀಡಿದರು. ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್‌, ನರ್ಸಿಂಗ್‌ ಅಧೀಕ್ಷಕಿ ಪದ್ಮಾ, ಫಾರ್ಮಾಸಿಸ್ಟ್‌ ಗುಣಶೇಖರ್‌, ಜೆಡಿಎಸ್‌ ಮುಖಂಡ ಬಿ.ಆರ್‌. ಗುಡ್ಡೇಗೌಡ ಇದ್ದರು   

ಮಾಗಡಿ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಬೇಕಾದ ಉಪಕರಣಗಳನ್ನು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ ₹ 25 ಲಕ್ಷ ವೆಚ್ಚದಡಿ ಒದಗಿಸಲಾಗಿದೆ ಎಂದು ಶಾಸಕ ಎ. ಮಂಜುನಾಥ್‌ ತಿಳಿಸಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಐಸಿಯು ಘಟಕಕ್ಕೆ ಒದಗಿಸಿರುವ ಉಪಕರಣಗಳ ಬಳಕೆಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಸರ್ಕಾರಿ ಆಸ್ಪತ್ರೆ ವೈದ್ಯರು ಐಸಿಯು ಘಟಕದ ಸದುಪಯೋಗ ಪಡೆದುಕೊಂಡು ಗ್ರಾಮೀಣ ಜನತೆಗೆ ಉತ್ತಮ ಚಿಕಿತ್ಸೆ ನೀಡಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿದ್ದಾರೆ. 24 ಗಂಟೆಯೂ ಸೇವೆ ಒದಗಿಸಲಾಗುತ್ತಿದೆ. ಸಾರ್ವಜನಿಕರು ಆಸ್ಪತ್ರೆಯ ಸವಲತ್ತುಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್‌ ಮಾತನಾಡಿ, ನಮ್ಮಲ್ಲಿನ ಸವಲತ್ತುಗಳನ್ನು ಬಳಸಿಕೊಂಡು ಎಲ್ಲಾ ವಿಧವಾದ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಐಸಿಯು ಘಟಕಕ್ಕೆ ಉಪಕರಣಗಳಿಲ್ಲದೆ ತೊಂದರೆಯಾಗಿತ್ತು. ಉಪಕರಣಗಳನ್ನು ಒದಗಿಸಿ ಅನುಕೂಲ ಮಾಡಿಕೊಟ್ಟಿರುವ ಸರ್ಕಾರ ಮತ್ತು ಶಾಸಕ ಸಹಾಯ ವನ್ನು ಸ್ಮರಿಸುತ್ತೇವೆ ಎಂದರು.

ವೈದ್ಯರಾದ ಡಾ.ಆಶಾದೇವಿ, ಡಾ.ಜ್ಞಾನಪ್ರಕಾಶ್‌, ಡಾ.ರಾಕೇಶ್‌, ಡಾ.ರಫೀಕ್‌, ಡಾ.ಯಶವಂತ್‌, ಡಾ.ಫಾರೂಕ್‌, ಡಾ.ಅಭಿಜಿತ್‌, ಡಾ.ನಾಗನಾಥ್‌, ಡಾ.ಪಲ್ಲವಿ, ಡಾ.ಮಂಜುಳಾ, ಡಾ.ರಶ್ಮಿ, ಡಾ.ಮುದೊಳೆ, ಡಾ.ಚಂದ್ರಲೇಖಾ ಮುದೊಳೆ, ನರ್ಸಿಂಗ್‌ ಅಧೀಕ್ಷಕಿ ಪದ್ಮಾ, ಫಾರ್ಮಾಸಿಸ್ಟ್‌ ಗುಣಶೇಖರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.