ADVERTISEMENT

ಕನಕಪುರ: ಗಮನ ಸೆಳೆದ ಅರಣ್ಯ ಮತದಾನ ಕೇಂದ್ರ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 6:41 IST
Last Updated 27 ಏಪ್ರಿಲ್ 2024, 6:41 IST
ಕನಕಪುರ ಜಿಟಿಟಿಸಿ ಅರಣ್ಯ ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಿದವರಿಗೆ ನಗರಸಭೆ ಪೌರಾಯುಕ್ತ ಎಂ.ಎಸ್‌.ಮಹದೇವು ಗಿಡಗಳನ್ನು ವಿತರಣೆ ಮಾಡಿದರು
ಕನಕಪುರ ಜಿಟಿಟಿಸಿ ಅರಣ್ಯ ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಿದವರಿಗೆ ನಗರಸಭೆ ಪೌರಾಯುಕ್ತ ಎಂ.ಎಸ್‌.ಮಹದೇವು ಗಿಡಗಳನ್ನು ವಿತರಣೆ ಮಾಡಿದರು   

ಕನಕಪುರ: ಮತದಾರರನ್ನು ಸೆಳೆಯಲು ಸ್ವೀಪ್‌ ಸಮಿತಿ ನಿರ್ಮಾಣ ಮಾಡಿದ್ದ ಅರಣ್ಯ ಮತಗಟ್ಟೆ ಕೇಂದ್ರ ಜನರ ಗಮನ ಸೆಳೆಯಿತು.

ನಗರದ ಸಂಗಮ ರಸ್ತೆಯಲ್ಲಿರುವ ಜಿಟಿಟಿಸಿ ಕೇಂದ್ರದಲ್ಲಿ ನಗರಸಭೆ ಪೌರಾಯುಕ್ತರು ಅರಣ್ಯ ಇಲಾಖೆ ಸಹಕಾರದೊಂದಿಗೆ ಅರಣ್ಯ ಮತಗಟ್ಟೆ ನಿರ್ಮಾಣ ಮಾಡಿ ಮೊದಲು ಮತದಾನಕ್ಕೆ ಬಂದ 500 ಮಂದಿಗೆ ಉಚಿತವಾಗಿ ಹಣ್ಣಿನ ಗಿಡಗಳನ್ನು ವಿತರಣೆ ಮಾಡಿದರು.

ಶುಕ್ರವಾರ ಬೆಳಗ್ಗೆ 6ಕ್ಕೆ ಅಣುಕು ಮತದಾನ ನಡಸಿ ಮತಪೆಟ್ಟಿಗೆಯನ್ನು ಪರಿಶೀಲಿಸಿ ಸರಿ ಇದೆ ಎಂದು ಖಾತರಿ ಪಡಿಸಿಕೊಂಡ ನಂತರ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸ್ವತಃ ನಗರಸಭೆ ಪೌರಾಯುಕ್ತ ಎಂ.ಎಸ್‌.ಮಹದೇವ್‌ ಅವರೇ ಮತದಾನ ಮಾಡಿದ ಮೊದಲ 500 ಮಂದಿಗೆ ಹಣ್ಣಿನ ಗಿಡಗಳನ್ನು ವಿತರಣೆ ಮಾಡಿದರು.

ADVERTISEMENT

ಗಿಡಗಳನ್ನು ಕೊಟ್ಟು ಈ ಗಿಡಗಳನ್ನು ಬೆಳಸುವ ಮೂಲಕ ಪರಿಸರ ಕಾಪಾಡಿ ಎಂದರು.

ಈ ಮತಗಟ್ಟೆಯಲ್ಲಿ ಶೇ67ರಷ್ಟು ಮತದಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.