ADVERTISEMENT

ಯುವಕನಿಗೆ ₹6.62 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2024, 6:06 IST
Last Updated 11 ಮಾರ್ಚ್ 2024, 6:06 IST

ಕುದೂರು: ಬಿಡುವಿನ ಅವಧಿಯಲ್ಲಿ ಕೆಲಸ ಮಾಡಿ, ಹಣ ಗಳಿಸಬಹುದು ಎಂದು ನಂಬಿಸಿ ಯುವಕನೊಬ್ಬನಿಗೆ ₹ 6.62 ಲಕ್ಷ ವಂಚಿಸಲಾಗಿದೆ.

ತಿಪ್ಪಸಂದ್ರ ಹೋಬಳಿಯ ಹುಳ್ಳೇನಹಳ್ಳಿಯ ಎ.ಕೆ. ಲಾಯ ಗ್ರಾಮದ ನಿವಾಸಿ ಬರ್ಕತ್ ಉಲ್ಲಾ ಖಾನ್ ಮೋಸ ಹೋದ ವ್ಯಕ್ತಿ. ಅವರ ವಾಟ್ಸ್ ಆ್ಯಪ್‌ಗೆ ಬಂದ ‘ಬಿಡುವಿನ ವೇಳೆಯಲ್ಲಿ ಕೆಲಸ ಮಾಡಿ, ಹಣ ಗಳಿಸಬಹುದು’ ಎಂಬ ಅನಾಮಧೇಯ ಸಂದೇಶಕ್ಕೆ ಮಾರುಹೋಗಿ ರಿಪ್ಲೈ ಮಾಡಿದ್ದಾರೆ. ನಂತರ ಲಿಂಕ್ಡ್ ಇನ್ ಐಡಿಯಾ 2024 ಟೆಲಿಗ್ರಾಂ ಲಿಂಕ್ ಅನ್ನು ಕಳಿಸಿ ಲಾಗಿನ್ ಆಗಲು ತಿಳಿಸಲಾಗಿದೆ. ನಂತರ ಅದರಲ್ಲಿ ಹೋಟೆಲ್‌ಗಳನ್ನು ರಿವ್ಯೂ ಮಾಡಿ 5 ಸ್ಟಾರ್ ರೇಟಿಂಗ್ ಕೊಟ್ಟರೆ ಹಣ ಗಳಿಸಬಹುದಾಗಿ ತಿಳಿಸಲಾಗಿದೆ. 

ಎರಡು– ಮೂರು ಬಾರಿ ಬಂದ ಲಾಭಕ್ಕೆ ಮಾರುಹೋಗಿ ಇನ್ನಷ್ಟು ಪ್ರಾಫಿಟ್ ಟಾಸ್ಕ್‌ಗಳನ್ನು ಆಡಿದರೆ ಇನ್ನಷ್ಟು ಹಣ ಗಳಿಸಬಹುದೆಂದು ನಂಬಿಸಿದ್ದಾರೆ. ಇದನ್ನು ನಂಬಿದ ಬರ್ಕತ್ ಉಲ್ಲಾ ಖಾನ್ ತಮ್ಮ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ಒಟ್ಟು ₹ 6.62 ಲಕ್ಷ ಹಾಕಿದ್ದಾರೆ. ನಂತರ ಯಾವುದೇ ಹಣ ಬರದಿದ್ದಾಗ ತಾವು ಮೋಸ ಹೋಗಿರುವುದು ಅರಿವಾಗಿದೆ. 

ADVERTISEMENT

ಈ ಸಂಬಂಧ ರಾಮನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.