ADVERTISEMENT

ಕೆಂಪೇಗೌಡ ಪ್ರೌಢಶಾಲೆಗೆ ಅನುದಾನ

ಪ್ರೌಢಶಾಲೆ ವಾರ್ಷಿಕೋತ್ಸವಕ್ಕೆ ಎ.ಎಚ್.ಬಸವರಾಜು ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 13:39 IST
Last Updated 29 ಡಿಸೆಂಬರ್ 2019, 13:39 IST
ಮಾಗಡಿ ಮಾಸನ ಆವಿಷ್ಕಾರ್‌2019–20ಕ್ಕೆ ಬಿಜೆಪಿ ಮುಖಂಡ ಎ.ಎಚ್‌.ಬಸವರಾಜು ಚಾಲನೆ ನೀಡಿದರು. ಟಿ.ಆರ್‌.ರಾಮಕೃಷ್ಣಯ್ಯ, ವಕೀಲ ಡಿ.ಎಚ್‌.ಮಲ್ಲಿಕಾರ್ಜುನಯ್ಯ ಇದ್ದರು
ಮಾಗಡಿ ಮಾಸನ ಆವಿಷ್ಕಾರ್‌2019–20ಕ್ಕೆ ಬಿಜೆಪಿ ಮುಖಂಡ ಎ.ಎಚ್‌.ಬಸವರಾಜು ಚಾಲನೆ ನೀಡಿದರು. ಟಿ.ಆರ್‌.ರಾಮಕೃಷ್ಣಯ್ಯ, ವಕೀಲ ಡಿ.ಎಚ್‌.ಮಲ್ಲಿಕಾರ್ಜುನಯ್ಯ ಇದ್ದರು   

ಮಾಗಡಿ: ಕೆಂಪೇಗೌಡ ಪ್ರೌಢಶಾಲೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ₹25ಲಕ್ಷ ಸಹಾಯಧನ ಕೊಡಿಸುವುದಾಗಿ ಬಿಜೆಪಿ ಮುಖಂಡ ಎ.ಎಚ್.ಬಸವರಾಜು ಭರವಸೆ ನೀಡಿದರು.

ಒಕ್ಕಲಿಗರ ಸಂಘದ ವತಿಯಿಂದ ನಡೆದ ಮಾನಸ ಪೂರ್ವ, ವಿದ್ಯಾನಿಧಿ ಪ್ರಾಥಮಿಕ ಮತ್ತು ಕೆಂಪೇಗೌಡ ಪ್ರೌಢಶಾಲೆ ವಾರ್ಷಿಕೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಒಕ್ಕಲಿಗರ ಸಂಘ ಸ್ಥಾಪಿಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಕೆಂಪೇಗೌಡ ಪ್ರೌಢಶಾಲೆ ಆರಂಭಿಸಿದ ಬಿ.ಎಲ್.ಲಕ್ಕೇಗೌಡ ಅವರು ನಿಸ್ವಾರ್ಥ ಸಮಾಜ ಸೇವಕರು. ಈಶಾಲೆ 13ವರ್ಷಗಳಿಂದಲೂ ಉತ್ತಮ ಫಲಿತಾಂಶ ಗಳಿಸಿದೆ. ಮಕ್ಕಳ ಶಿಕ್ಷಣಕ್ಕೆ ಬೇಕಾದ ಸವಲತ್ತು ನೀಡಲಾಗುವುದು. ಪೋಷಕರು ಮಕ್ಕಳನ್ನು ದೇಶಭಕ್ತರನ್ನಾಗಿಸಲು ಹೆಚ್ಚಿನ ಒತ್ತು ಕೊಡಬೇಕು ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಮಾತನಾಡಿ, ಹಣ ಮತ್ತು ಜಾತಿ ಬಲ ಇದ್ದವರು ಮಾತ್ರ ರಾಜಕೀಯದಲ್ಲಿ ಮುಂದುವರಿಯಬಹುದು. ಜ್ಞಾನ, ಭಾವ, ಶೀಲ, ನೈತಿಕ ಶಿಕ್ಷಣಕ್ಕೆ ಶಿಕ್ಷಕರು ಮತ್ತು ಪೋಷಕರು ಶ್ರಮಿಸಬೇಕು. ಮಕ್ಕಳ ನಡೆತೆಯತ್ತ ನಿತ್ಯ ಪೋಷಕರು ಗಮನಿಸಬೇಕು. ಮಕ್ಕಳನ್ನು ಕೇವಲ ಎಂಜಿನಿಯರ್, ಡಾಕ್ಟರ್ ಮಾಡಬೇಕೆಂಬ ಹಂಬಲಕ್ಕಿಂತ ಮಕ್ಕಳು ಇಷ್ಟಪಡುವ ವಿಷಯದತ್ತ ಬೆಂಬಲಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ.ಎಸ್.ಮಾತನಾಡಿ, ಜನನ ಮತ್ತು ಮರಣದ ನಡುವೆ ಉತ್ತಮ ಕೆಲಸ ಮಾಡಿ ಹೆಸರು ಗಳಿಸುವಂತೆ ಮಕ್ಕಳಿಗೆ ಪೋಷಕರು ಹಾಗೂ ಶಿಕ್ಷಕರು ದಾರಿದೀಪವಾಗಬೇಕು. ಸಮಾಜ ಮುಖಿಚಿಂತನೆಯತ್ತ ಮಕ್ಕಳ ಗಮನ ಸೆಳೆಯಬೇಕು ಎಂದರು.

ರಾಜ್ಯ ಬೆಸ್ಕಾಂ ನೌಕರರ ಸಂಘದ ಅಧ್ಯಕ್ಷ ಟಿ.ಆರ್.ರಾಮಕೃಷ್ಣಯ್ಯ ಮಾತನಾಡಿ, ಕಡಿಮೆ ಶುಲ್ಕ ಪಡೆದು ಬಡವ, ಬಲ್ಲಿದ ಮಕ್ಕಳು ಎಂಬ ತಾರತಮ್ಯ ಇಲ್ಲದೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳಲ್ಲಿ ವಿಶೇಷ ಶಕ್ತಿ ಇದೆ. ಸರ್.ಎಂ.ವಿಶ್ವೇಶ್ವರಯ್ಯ, ಡಾ.ಎ.ಪಿ.ಜೆ,ಅಬ್ದುಲ್ ಕಲಾಂ ಅವರಂತಹ ಸಾಧಕರ ಜೀವನ ಚೆರಿತ್ರೆ ಬಾಲ್ಯದಲ್ಲಿಯೇ ಮಕ್ಕಳಿಗೆ ಮನದಟ್ಟು ಮಾಡಿಕೊಡಬೇಕು ಎಂದು ಹೇಳಿದರು.

ಹಿರಿಯ ವಕೀಲ ಡಿ.ಎಚ್.ಮಲ್ಲಿಕಾರ್ಜುನಯ್ಯ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿ ಅಕ್ಕರೆ ವಿದ್ಯೆ ನೀಡಲು ಪೋಷಕರ ಸಹಕಾರ ಅಗತ್ಯ ಎಂದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ರಂಗಧಾಮಯ್ಯ, ನಿವೃತ್ತ ಶಿಕ್ಷಕ ಎಂ.ರೇವಣ್ಣ, ಒಕ್ಕಲಿಗರ ಸಂಘದ ನಿರ್ದೇಶಕರಾದ ದೇವರಾಜೇಗೌಡ, ತಾಳೆಕೆರೆನಾಗಪ್ಪ, ಕರಲಮಂಗಲ ಧನಂಜಯ, ರಾಧಾಕೃಷ್ಣೆಗೌಡ, ವಿಜಯಕುಮಾರ್, ಎಂ.ಕೆ.ಧನಂಜಯ, ಎಚ್.ಆರ್.ರಮೇಶ್, ಕಿರಣ್‌ ಕುಮಾರ್‌, ಪುರಸಭೆ ಸದಸ್ಯರಾದ ಎಚ್.ಜೆ.ಪುರುಷೋತ್ತಮ್, ಭಾಗ್ಯಮ್ಮ ನಾರಾಯಣಪ್ಪ, ಎಪಿಎಂಸಿ ನಿರ್ದೇಶಕ ಸಿ.ಎಂ.ಮಾರೇಗೌಡ, ಬಿ.ಆರ್.ಪಿ ಮಂಜಪ್ಪ, ಶಿಕ್ಷಣ ಸಂಯೋಜಕ ಶಿವಲಿಂಗಯ್ಯ, ಪೋಷಕ ಬೋಧಕ ಸಮಿತಿ ಅಧ್ಯಕ್ಷ ಟಿ.ಎಂ.ಶ್ರೀನಿವಾಸ್, ಸದಸ್ಯರಾದ ಪುರುಷೋತ್ತಮ್, ಭಾಗ್ಯಮ್ಮ, ಬಿಜೆಪಿ ಮುಖಂಡರಾದ ರಾಘವೇಂದ್ರ ನೇಕಾರ, ಜ್ಯೋತಿಪಾಳ್ಯದ ಧನಂಜಯ, ಮಾರಪ್ಪ ದೊಂಬಿದಾಸ ಪ್ರಾಂಶುಪಾಲ ಶ್ರೀನಿವಾಸ್, ಶಿಕ್ಷಕರಾದ ಶಾರದಮ್ಮ, ಅರಸನಾಳ್, ಲೋಕೇಶ್, ಶಿವಕುಮಾರ್ ಇದ್ದರು. ಸಾಧಕರನ್ನು ಸನ್ಮಾನಿಸಲಾಯಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.