ಹಾರೋಹಳ್ಳಿ: ಹಾರೋಹಳ್ಳಿ ತಾಲ್ಲೂಕು ಗೊಟ್ಟಿಗೆಹಳ್ಳಿ ಗ್ರಾಮದಲ್ಲಿ ಸೀಮೆ ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ. ಮಂಗಳವಾರ ಗೊಟ್ಟಿಗೆಹಳ್ಳಿ ಗ್ರಾಮದ ಮಂಜುನಾಥ್ ಎಂಬುವವರ ಸೀಮೆ ಹಸು ಇದುವರೆವಿಗೂ ಒಂದೊಂದು ಕರುವಿಗೆ ಜನ್ಮ ನೀಡಿತ್ತು, ಇದೀಗ ಮೂರು ಕರುಗಳಿಗೆ ಒಮ್ಮೆಲೆ ಜನ್ಮನೀಡಿ ಅಚ್ಚರಿ ಮೂಡಿಸಿದೆ. ಎರಡು ಗಂಡು ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಸ್ಥಳಕ್ಕೆ ಮರಳವಾಡಿ ಕಿರಿಯ ಪಶು ವೈದ್ಯಕೀಯ ಪರೀಕ್ಷಕ ಸಂತೋಷ್ ಭೇಟಿ ನೀಡಿ ತಪಾಸಣೆ ನಡೆಸಿದ್ದು, ಹಸು ಮತ್ತು ಕರುಗಳು ಆರೋಗ್ಯವಾಗಿವೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.