ಬಂಧನ
ಹಾರೋಹಳ್ಳಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಹಾರೋಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾರೋಹಳ್ಳಿ ಕೆಎಸ್‌ಆರ್‌ಟಿಸಿ ಬಸ್ ಡಿಪೊ ಬಳಿ ಮಾರಕಾಸ್ತ್ರಗಳಿಂದ ಸಿದ್ದಾಪುರ ಸಂತೋಷ್ ಎಂಬುವರನ್ನು ಕೊಲೆ ಮಾಡಲಾಗಿತ್ತು. ಆರೋಪಿಗಳನ್ನು ಹುಕುಂದ ಗ್ರಾಮದ ವರುಣ್ (30), ದೊಡ್ಡಕಲ್ಲಸಂದ್ರದ ರಜಿತ್ (28), ಹರೀಶ ಅಲಿಯಾಸ್ ಲೊಡ್ಡೆ(29), ಮದ್ದೂರು ಮೂಲದ ದರ್ಶನ್ ಅಲಿಯಾಸ್ ಆಟೊ ಧನು (25), ಚಿರಣಕುಪ್ಪೆ ಯಶ್ವಂತ್ ಅಲಿಯಾಸ್ ರಿಚ್ ಕಿಡ್ (22) ಎಂದು ಗುರುತಿಸಲಾಗಿದೆ.
ತನಿಖೆಯಲ್ಲಿ ಎಸ್ಪಿ ಶ್ರೀನಿವಾಸ್ ಗೌಡ, ಡಿವೈಎಸ್ಪಿ ಶ್ರೀನಿವಾಸ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಅರ್ಜುನ್ ನೇತೃತ್ವದಲ್ಲಿ ಪಿಎಸ್‌ಐ ನಟರಾಜು, ಅಯೂಬ್ ಪಾಷಾ, ಅನಂತ್ ಕುಮಾರ್, ಶಿವರಾಜು, ಶ್ರೀನಿವಾಸ್, ವಿರೂಪಾಕ್ಷ, ಯೋಗೀಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.