ADVERTISEMENT

ಹಾರೋಹಳ್ಳಿ: ದೇಶಾಭಿಮಾನ ಬೆಳೆಸುವಲ್ಲಿ ಸ್ಕೌಟ್ಸ್ ಗೈಡ್ಸ್ ಪಾತ್ರ ಮಹತ್ವದ್ದು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 16:08 IST
Last Updated 26 ಆಗಸ್ಟ್ 2024, 16:08 IST
ಹಾರೋಹಳ್ಳಿಯ ಪ್ರಗತಿ ಶಾಲೆಯಲ್ಲಿ ಸ್ಕೌರ‍್ಸ್ ಮತ್ತು ಗೈರ‍್ಸ್ ಸಮಾವೇಶ ನಡೆಯಿತು.
ಹಾರೋಹಳ್ಳಿಯ ಪ್ರಗತಿ ಶಾಲೆಯಲ್ಲಿ ಸ್ಕೌರ‍್ಸ್ ಮತ್ತು ಗೈರ‍್ಸ್ ಸಮಾವೇಶ ನಡೆಯಿತು.   

ಹಾರೋಹಳ್ಳಿ: ದೇಶಾಭಿಮಾನ ಬೆಳೆಸುವಲ್ಲಿ ಸ್ಕೌಟ್ಸ್ ಗೈಡ್ಸ್ ಪಾತ್ರ ಮಹತ್ವದ್ದಾಗಿದ್ದು ಪ್ರತಿಯೊಂದು ಶಾಲೆಗಳಲ್ಲೂ ಸ್ಕೌಟ್ಸ್ ಗೈಡ್ಸ್ ಘಟಕಗಳು ಆರಂಭವಾಗಲಿ ಎಂದು ಸ್ಕೌಟ್ಸ್ ಗೈಡ್ಸ್ ಮುಖ್ಯ ಆಯುಕ್ತ ಮತ್ತು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಹೇಳಿದರು.

ಹಾರೋಹಳ್ಳಿಯ ಪ್ರಗತಿ ವಿದ್ಯಾನಿಕೇತನ ಶಾಲಾ ಆವರಣದಲ್ಲಿ ನಡೆದ ಒಂದು ದಿನದ ಸ್ಕೌರ‍್ಸ್ ಮತ್ತು ಗೈರ‍್ಸ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶಾಭಿಮಾನಿಯಾದವನು ರಾಷ್ಟçವನ್ನು ರಕ್ಷಿಸುತ್ತಾನೆ. ಶಿಕ್ಷಕರು ಮಕ್ಕಳನ್ನು ಜವಾಬ್ದಾರಿಯುತ ನಾಗರೀಕರನ್ನಾಗಿ ರೂಪಿಸುತ್ತಾರೆ. ಮಕ್ಕಳಲ್ಲಿ ಶಿಸ್ತು,ಧೈರ್ಯ,ದೇಶಪ್ರೇಮ,ನಾಡು ನುಡಿ ಬಗ್ಗೆ ಗೌರವ ಸಮಯ ಪ್ರಜ್ಙೆ, ಹಾಗೂ ರಾಷ್ಟಿçÃಯ ನಾಯಕರ ಬಗ್ಗೆ ಅಭಿಮಾನವನ್ನು ಬೆಳೆಸುವ ಮಹತ್ವದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಇದೇ ವೇಳೆ ಪ್ರಗತಿ ಶಾಲೆಯ ಸಂಸ್ಥಾಪಕ ಶಿವನಂಜಪ್ಪ ಮಾತನಾಡಿ, ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ಸ್ ಗೈಡ್ಸ್ನ ಇತು ಮತ್ತು ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ. ಮಕ್ಕಳು ನಾಲ್ಕು ಗೋಡೆಗಳ ನಡುವೆ ಓದು ಬರಹ ಕಲಿಯುವುದರ ಜತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು, ಸಮಬ್ಯದಿಂದ ಬಾಳಲು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ಸಹಕಾರಿಯಾಗಲಿವೆ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಹಿರಿಯರಾದ ನಾರಾಯಣ ಸ್ವಾಮಿಯವರನ್ನು ಸನ್ಮಾನಿಸಲಾಯಿತು,ರಾಜ್ಯ ಪದಾಧಿಕಾರಿಗಳಾದ ಚಿನ್ನಸ್ವಾಮಿ ರೆಡ್ಡಿ,ಚಲ್ಲಯ್ಯ,ಹೊನ್ನಮ್ಮ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.