ADVERTISEMENT

ಹಾರೋಹಳ್ಳಿ | ಬೀಗ ಮುರಿದು ಕಳ್ಳತನ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 2:51 IST
Last Updated 22 ಡಿಸೆಂಬರ್ 2025, 2:51 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಹಾರೋಹಳ್ಳಿ: ಹತ್ತು ದಿನಗಳ ಹಿಂದೆ ಹಗಲು ಹೊತ್ತಿನಲ್ಲಿಯೇ ಮರಳವಾಡಿ ಹೋಬಳಿಯ ಮರಸರಹಳ್ಳಿಯ ಮನೆಯೊಂದರ ಬೀಗ ಮುರಿದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ಆನೆಕಲ್‌ ತಾಲೂಕಿನ ಗೌರೇನಹಳ್ಳಿ ಗ್ರಾಮದ ಮಂಜುನಾಥ್ (36) ಹಾಗೂ ರಿಯಾಜ್ ಪಾಷಾ ಅಲಿಯಾಸ್ ಕಾಲು (42) ಎಂಬುವರನ್ನು ಬಂಧಿಸಿ 151 ಗ್ರಾಂ ಚಿನ್ನಾಭರಣ, 32 ಗ್ರಾಂ ಬೆಳ್ಳಿ ಸರ ಮತ್ತು ₹18 ಸಾವಿರ ನಗದು, ಕೃತ್ಯಕ್ಕೆ ಬಳಸಿದ ಆಟೊ, ಬೈಕ್ ಸೇರಿದಂತೆ ₹20 ಲಕ್ಷ ಮೌಲ್ಯದ ವಶಪಡಿಸಿಕೊಂಡಿದ್ದಾರೆ. 

ADVERTISEMENT

ಡಿ.11ರಂದು ಮರಳವಾಡಿ ಹೋಬಳಿಯ ಮರಸರಹಳ್ಳಿಯ ಕೃಷ್ಣ ಎಂಬುವರ ಪತ್ನಿ ಹಾಗೂ ಮಗಳು ಮನೆಗೆ ಬೀಗ ಹಾಕಿ ತೋಟಕ್ಕೆ ಹೋದಾಗ ಬೀಗ ಮುರಿದು ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು. ಹಾರೋಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು.ಪ್ರಕರಣ ದಾಖಲಿಸಿಕೊಂಡಿದ್ದ ಹಾರೋಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದರು.

ಆರೋಪಿಗಳ ಪತ್ತೆ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಹೊರಬಂದಿದೆ. ಆರೋಪಿಗಳು ಈ ಹಿಂದೆ ಅರಳಿಮರದದೊಡ್ಡಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿರುವ ವಿಷಯವನ್ನು ವಿಚಾರಣೆ ಸಮಯದಲ್ಲಿ ಬಾಯ್ಬಿಟ್ಟಿದ್ದಾರೆ.

ಒಟ್ಟು 2 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಹಾರೋಹಳ್ಳಿ ಪೊಲೀಸ್‌ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಉಪ ನಿರೀಕ್ಷಕರುಗಳು ಮತ್ತು ಸಿಬ್ಬಂದಿ ಅಯ್ಯುಬ್ ಪಾಷ, ಅನಂತ್ ಕುಮಾರ್, ಬೋರೇಗೌಡ, ಶಂಕರಲಿಂಗ ಕುಂಬಾರ್, ಶ್ರೀಧರ್ ಕರಣಿ, ಯೋಗೇಶ, ಫೈರೋಜ್ ಪಾಷಾ ರವರುಗಳು ಯಶಸ್ವಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.