ADVERTISEMENT

ಕಲಾವಿದರ ನೆರವಿಗೆ ಸರ್ಕಾರ ಮುಂದಾಗಲಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 13:20 IST
Last Updated 14 ಫೆಬ್ರುವರಿ 2020, 13:20 IST
ಚನ್ನಪಟ್ಟಣದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ನಡೆದ ದಕ್ಷಯಜ್ಞ ಪೌರಾಣಿಕ ನಾಟಕ ಪ್ರದರ್ಶನದಲ್ಲಿ ಕಲಾವಿದರನ್ನು ಸನ್ಮಾನಿಸಲಾಯಿತು
ಚನ್ನಪಟ್ಟಣದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ನಡೆದ ದಕ್ಷಯಜ್ಞ ಪೌರಾಣಿಕ ನಾಟಕ ಪ್ರದರ್ಶನದಲ್ಲಿ ಕಲಾವಿದರನ್ನು ಸನ್ಮಾನಿಸಲಾಯಿತು   

ಚನ್ನಪಟ್ಟಣ: ‘ರಂಗಭೂಮಿ ಕಲಾವಿದರಿಗೆ ಸರ್ಕಾರ ವಿಶೇಷ ಸೌಲಭ್ಯಗಳನ್ನು ನೀಡಬೇಕು’ ಎಂದು ಸಮಾಜ ಸೇವಕ ಕೂರಣಗೆರೆ ಕೃಷ್ಣಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ಸ್ನೇಹಜ್ಯೋತಿ ಸಾಂಸ್ಕೃತಿಕ ಕಲಾ ಟ್ರಸ್ಟ್, ಅಭಿನವ ಕಲಾನಿಕೇತನ ಸಾಂಸ್ಕೃತಿಕ ಕಲಾ ಟ್ರಸ್ಟ್, ಶ್ರೀ ಕೆಂಗಲ್ ಸಾಂಸ್ಕೃತಿಕ ಕಲಾ ಟ್ರಸ್ಟ್ ಹಾಗೂ ಅಮರಜ್ಯೋತಿ ಕಲಾ ಟ್ರಸ್ಟ್ ಆಶ್ರಯದಲ್ಲಿ ಈಚೆಗೆ ಆಯೋಜಿಸಲಾಗಿದ್ದ ದಕ್ಷಯಜ್ಞ ಪೌರಾಣಿಕ ನಾಟಕ ಪ್ರದರ್ಶನ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

‘ನಾಟಕ ಕಲೆಯನ್ನು ಕರಗತ ಮಾಡಿಕೊಂಡು ಸಾವಿರಾರು ವರ್ಷಗಳ ಹಿಂದೆ ನಡೆದಿರುವ ದೈವಲೀಲೆಗಳನ್ನು ಅಭಿನಯಿಸುವುದು ಸಾಮಾನ್ಯದ ವಿಚಾರವಲ್ಲ. ಕಲಾವಿದರ ಕಲೆ ಗುರುತಿಸುವುದು ಅಗತ್ಯ. ರಾಜ್ಯದಲ್ಲಿ ಅಪ್ರತಿಮ ಕಲಾವಿದರು ಇದ್ದಾರೆ. ಕಲಾವಿದರಲ್ಲಿ ನೈಜತೆ ಇದೆ. ಇವರ ನೆರವಿಗೆ ಸರ್ಕಾರ ಮುಂದಾಗಬೇಕು’ ಎಂದರು.

ADVERTISEMENT

ರಂಗಭೂಮಿ ಕಲಾವಿದ ಡಾ.ಸಿ.ಪಿ.ಪ್ರಕಾಶ್ ಅವರಿಗೆ ಬೆಳ್ಳಿ ಕಿರೀಟ ನೀಡಲಾಯಿತು. ರಂಗಭೂಮಿ ಕಲಾವಿದರನ್ನು ಸನ್ಮಾನಿಸಲಾಯಿತು.

ರಂಗಭೂಮಿ ನಿರ್ದೇಶಕ ಎಂ.ಕೆ.ಧರ್ಮೇಂದ್ರ ಕುಮಾರ್, ಟ್ರಸ್ಟ್ ಅಧ್ಯಕ್ಷ ಮತ್ತೀಕೆರೆ ಎಂ.ಸಿ.ಶ್ರೀನಿವಾಸ್, ಉಪಾಧ್ಯಕ್ಷ ಎಚ್.ಮೋಗೇನಹಳ್ಳಿ ವೆಂಕಟೇಶ್, ಖಜಾಂಚಿ ಕೂರಣಗೆರೆ ಕೆ.ಎಸ್.ಸ್ವಾಮಿ, ಕಾರ್ಯದರ್ಶಿ ಚಿಕ್ಕೇನಹಳ್ಳಿ ಸ್ವಾಮಿ, ಗೌರಾವಾಧ್ಯಕ್ಷ ಎಚ್.ಮೋಗೇನಹಳ್ಳಿ ಸೀನ, ನಿರ್ದೇಶಕರಾದ ಹುಲುವಾಡಿ ಸಿದ್ದಪ್ಪ, ತಗಚಗೆರೆ ಬೈರವ, ಎಂ.ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.