ಮಾಗಡಿ: ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದು ಹೋಂ ಕ್ವಾರಂಟೈನಲ್ಲಿ ಇದ್ದ 7ಜನರು ನಿಯಮ ಉಲ್ಲಂಘಿಸಿ ಅಲೆದಾಡುತ್ತಿದ್ದು, ಅವರ ವಿರುದ್ಧ ದೂರು ದಾಖಲು ಮಾಡಲಾಗಿದೆ ಎಂದುತಹಶೀಲ್ದಾರ್ ಬಿ.ಜಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.
7 ಜನರ ವಿರುದ್ಧ ಠಾಣಾಧಿಕಾರಿ ಎಚ್.ಸಿ. ಮಂಜುನಾಥ ಎಫ್‌ಐಆರ್ ದಾಖಲಿಸಿದ್ದಾರೆ.ಕಾನೂನು ಉಲ್ಲಂಘನೆ ಮಾಡುವುದು ಅಪರಾಧ. ಎಚ್ಚರಿಕೆ ನೀಡಿದ ನಂತರವೂ ಅಲೆದಾಡಿದರೆ, ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು. ಪುರಸಭೆ ವ್ಯಾಪ್ತಿಯ ಕೊರೊನಾ ಇನ್ಸಿಡೆಂಟ್ ಕಮಾಂಡೋಗಳಾದ ಬಿ.ಎಂ.ಸುಷ್ಮಾ, ಪ್ರಶಾಂತ್ ಕುಮಾರ್ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದರಿಂದ ಪ್ರಕರಣದ ದಾಖಲಾಗಿದೆ ಎಂದು ತಹಶೀಲ್ದಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.