ಚಿತ್ರದುರ್ಗ ಸಿದ್ದರಾಮೇಶ್ವರ ಭೋವಿ ಗುರುಪೀಠದಲ್ಲಿ ನಡೆದ 25ನೇ ದೀಕ್ಷಾ ರಜತಾ ಮಹೋತ್ಸವದಲ್ಲಿ ಮಾಗಡಿ ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಮಾಗಡಿ: ಚಿತ್ರದುರ್ಗ ಸಿದ್ದರಾಮೇಶ್ವರ ಭೋವಿ ಗುರು ಪೀಠದಲ್ಲಿ ನಡೆದ 25ನೇ ದೀಕ್ಷಾ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಭೋವಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪಿಯುನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿ.ಹೇಮಂತ್, ಕೆ.ಎಸ್.ಶೋಭಾ, ಎಚ್.ಆರ್.ವಿದ್ಯಾಶ್ರೀ, ಜಿ.ಜೆ.ರಶ್ಮಿ, ಯು.ಸಹನಾ, ಜಿ.ಹಿತಾಶ್ರೀ, ಹೇಮಂತ್ ಅವರನ್ನು ಸತ್ಕರಿಸಲಾಯಿತು.
ತಾಲ್ಲೂಕಿನ ಮುಖಂಡರಾದ ರೋಟರಿ ಮಾಜಿ ಅಧ್ಯಕ್ಷ ಶಂಕರ್, ಚಂದೂರಾಯನಹಳ್ಳಿ ಶಿವರಾಮಯ್ಯ, ಗುದ್ದಲಹಳ್ಳಿ ಗುರುಮೂರ್ತಿ, ಹನಯಮಾಪುರ ರಾಜಣ್ಣ, ಅರುಂಧತಿ ಚಿಕ್ಕಣ್ಣ, ತಾ.ಪಂ.ಮಾಜಿ ಅಧ್ಯಕ್ಷ ಬಿ.ಟಿ ವೆಂಕಟೇಶ್, ತೊರೆರಾಂಪುರ ರಾಜಣ್ಣ, ನಾಗರಾಜು, ನವೀನ್, ಹೂಜಗಲ್ ವೆಂಕಟೇಶ್, ಕಣ್ಣೂರು ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.