ADVERTISEMENT

ಬೇಟೆ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 7 ಮೇ 2020, 10:44 IST
Last Updated 7 ಮೇ 2020, 10:44 IST
ಬಂಧಿತ ಆರೋಪಿಗಳೊಂದಿಗೆ ವನ್ಯಜೀವಿ ವಲಯ ಅರಣ್ಯ ಅಧಿಕಾರಿಗಳು
ಬಂಧಿತ ಆರೋಪಿಗಳೊಂದಿಗೆ ವನ್ಯಜೀವಿ ವಲಯ ಅರಣ್ಯ ಅಧಿಕಾರಿಗಳು   

ಕನಕಪುರ: ವನ್ಯಜೀವಿ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಕಾಡು ಮೊಲಗಳನ್ನು ಬೇಟೆಯಾಡುತ್ತಿದ್ದ ತಂಡದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ಬೈಕ್‌ ವಶಕ್ಕೆ ಪಡೆದಿದ್ದಾರೆ.

ಕಾವೇರಿ ವನ್ಯಜೀವಿ ಅಭಯಾರಣ್ಯದ ವಿಭಾಗದ ಭೂಹಳ್ಳಿ ಶಾಖೆಯಲ್ಲಿ ಘಟನೆ ನಡೆದಿದೆ. ಖಚಿತ ಮಾಹಿತಿಯನ್ನು ಆಧರಿಸಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿನನಾಯ್ಕನಹಳ್ಳಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ನೀಲಗಿರಿ ತೋಪು ಅರಣ್ಯದಲ್ಲಿ ನಾಲ್ವರ ತಂಡ ಕಾಡು ಮೊಲಗಳನ್ನು ಬೇಟೆಯಾಡುತ್ತಿತ್ತು.ದಾಳಿ ವೇಳೆಯಲ್ಲಿ ಇಬ್ಬರು ಆರೋಪಿಗಳು ಸಿಕ್ಕಿ ಉಳಿದಿಬ್ಬರು ಪರಾರಿಯಾಗಿದ್ದಾರೆ.

ಆರೋಪಿಗಳಿಂದ ಮೂರು ಬೈಕ್‌ ಮತ್ತು ಬೇಟೆಯಾಡಿದ ಒಂದು ಮೊಲ ಹಾಗೂ ಬೇಟೆಗೆ ಬಳಸಿದ ವಸ್ತು ವಶಕ್ಕೆ ಪಡೆಯಲಾಗಿದೆ.

ADVERTISEMENT

ತಾಲ್ಲೂಕಿನ ಉಯ್ಯಂಬಳ್ಳಿ ಗ್ರಾಮದ ಚಿಕ್ಕರಾಜು (50), ಉಮೇಶ್‌ ಪಟೇಲ್‌ (45), ಶಿವಮಲಯ್ಯ (32) , ನಾಯ್ಕನಹಳ್ಳಿ ಗ್ರಾಮದ ಕೃಷ್ಣ (49)‌ ಆರೋಪಿಗಳು. ಚಿಕ್ಕರಾಜು ಮತ್ತು ಉಮೇಶ್‌ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ವಲಯ ಅರಣ್ಯಾಧಿಕಾರಿ ಕಿರಣ್‌ಕುಮಾರ್‌ ಜಿ.ಕರತಂಗಿ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಸಿ.ಅನಿಲ್‌ಕುಮಾರ್‌, ಅರಣ್ಯ ರಕ್ಷಕರಾದ ವೆಂಕಟೇಶ್‌, ಶರಣಪ್ಪ, ಅರಣ್ಯ ವೀಕ್ಷಕರಾದ ರವಿ, ಕಾರ್ತಿಕ್‌, ಸುನಿಲ್‌, ಬಾಲರಾಜ್‌, ಸುದೀಪ್‌, ಕುಮಾರ್‌, ಶಿವರುದ್ರ, ಸಂಜಯ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.