ಕುದೂರು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಇತಿಹಾಸ ವಿಭಾಗ, ಉದ್ಯೋಗ ಕೋಶ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ 'ಇತಿಹಾಸ - ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿಗೆ ಮೂಲಧಾರ’ ಎಂಬ ವಿಷಯ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಹಾಸನ ಜಿಲ್ಲೆಯ ಹಿರಿಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುನಿಲ್ ಕುಮಾರ್ ಎಚ್.ಬಿ ಮಾತನಾಡಿ, ಈಗ ಇತಿಹಾಸದ ವಸ್ತುಸ್ಥಿತಿ ಮರೆತು ಪ್ರಚೋದನಕಾರಿಯಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಪ್ರಚೋದನಕಾರಿ ಅಂಶಗಳಿಂದ ಇತಿಹಾಸದ ಅಡಿಪಾಯ ಶಿಥಿಲವಾಗುವ ಅಪಾಯ ಹೆಚ್ಚು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಗುರುಮೂರ್ತಿ ಕೆ.ಎಚ್ ಮಾತನಾಡಿ, ಇಂದಿನ ಶಿಕ್ಷಣದ ಜತೆ ಕೌಶಲ ಅವಶ್ಯ ಇದೆ. ಉದ್ಯೋಗ ಹೊಂದಬೇಕಾದರೆ ಹಲವು ರೀತಿಯ ಕೌಶಲವನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಧ್ಯಾಪಕರಾದ ರಾಜಕುಮಾರ್, ಶಿವರಾಜ್, ತ್ಯಾಗರಾಜ್, ಕೃಷ್ಣವೇಣಿ, ಚಂದ್ರಪ್ರಭಾ, ಸಿದ್ದೇಶ್ವರ, ಪುಟ್ಟಲಕ್ಷ್ಮಯ್ಯ, ರಾಘವೇಂದ್ರ, ಪ್ರಭು ಮತ್ತು ಡಾ.ಮುರಳಿ ಕೂಡ್ಲೂರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.