ಕನಕಪುರ: ಬರಡನಹಳ್ಳಿ ಬಸವೇಶ್ವರ ಸ್ವಾಮಿ ಅಗ್ನಿಕೊಂಡೋತ್ಸವ ಮಂಗಳವಾರ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಬಸವೇಶ್ವರ ಸ್ವಾಮಿ ಅಗ್ನಿಕೊಂಡದ ಯಳವಾರ ಕಾರ್ಯಕ್ರಮ ಸೋಮವಾರ ರಾತ್ರಿ ಗ್ರಾಮದಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಬಂದ ಯಳವಾರಕ್ಕೆ ಮನೆಯ ಮುಂದೆ ಮಹಿಳೆಯರು ಪೂಜೆ ಸಲ್ಲಿಸಿದರು.
ಮುಂಜಾನೆ 3ಕ್ಕೆ ಯಳವಾರ ಮೆರವಣಿಗೆ ಮುಕ್ತಾಯವಾಗಿ, ಸೌದೆಯನ್ನು ಕೊಂಡದಲ್ಲಿಟ್ಟು ಪೂಜೆಯೊಂದಿಗೆ ಅಗ್ನಿ ಸ್ಪರ್ಶಿಸಲಾಯಿತು. ಮಂಗಳವಾರ ಬೆಳಿಗ್ಗೆ ಮಂಗಳವಾದ್ಯದೊಂದಿಗೆ ದೇವರನ್ನು ಚಿಕ್ಕಹೊಳೆಯಿಂದ ಮೆರವಣಿಗೆ ಮೂಲಕ ಕರೆತರಲಾಯಿತು. ದೇವಸ್ಥಾನದ ಅರ್ಚಕ ವೀರಭದ್ರು ದೇವರನ್ನು ಹೊತ್ತು ಅಗ್ನಿಕೊಂಡವನ್ನು ಪ್ರವೇಶಿಸಿ ಯಶಸ್ವಿಯಾಗಿ ಕೊಂಡ ಆಯ್ದರು.
ಕೊಂಡೋತ್ಸವದಲ್ಲಿ ಸಾವಿರಾರು ಮಂದಿ ನೆರೆದಿದ್ದು, ದೇವರು ಕೊಂಡ ಪ್ರವೇಶಿಸುತಿದ್ದಂತೆ ಹರ್ಷೋದ್ಗಾರ ಮೊಳಗಿತು. ದೇಗುಲಮಠದ ಶಾಖ ಮಠ ಅತ್ತಿಹಳ್ಳಿಯ ನಿರಂಜನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.