ADVERTISEMENT

ಜೆಡಿಎಸ್ ಬೆಂಬಲಿಗರ ಮೇಲುಗೈ

ವಳಗೆರೆದೊಡ್ಡಿ ಎಂಪಿಸಿಎಸ್ ಚುನಾವಣೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 5:01 IST
Last Updated 4 ಸೆಪ್ಟೆಂಬರ್ 2022, 5:01 IST
ಚನ್ನಪಟ್ಟಣ ತಾಲ್ಲೂಕಿನ ವಳಗೆರದೊಡ್ಡಿ ಎಂಪಿಸಿಎಸ್ ಆಡಳಿತ ಮಂಡಳಿಗೆ ಆಯ್ಕೆಯಾದ ನೂತನ ನಿರ್ದೇಶಕರನ್ನು ಅಭಿನಂದಿಸಲಾಯಿತು. ಬಮೂಲ್ ನಿರ್ದೇಶಕ ಎಚ್.ಸಿ. ಜಯಮುತ್ತು, ಮುಖಂಡ ಮೆಹರೀಶ್ ಹಾಜರಿದ್ದರು
ಚನ್ನಪಟ್ಟಣ ತಾಲ್ಲೂಕಿನ ವಳಗೆರದೊಡ್ಡಿ ಎಂಪಿಸಿಎಸ್ ಆಡಳಿತ ಮಂಡಳಿಗೆ ಆಯ್ಕೆಯಾದ ನೂತನ ನಿರ್ದೇಶಕರನ್ನು ಅಭಿನಂದಿಸಲಾಯಿತು. ಬಮೂಲ್ ನಿರ್ದೇಶಕ ಎಚ್.ಸಿ. ಜಯಮುತ್ತು, ಮುಖಂಡ ಮೆಹರೀಶ್ ಹಾಜರಿದ್ದರು   

ಚನ್ನಪಟ್ಟಣ: ತಾಲ್ಲೂಕಿನ ವಳಗೆರದೊಡ್ಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ 9 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತರು ಜಯಭೇರಿ ಬಾರಿಸಿದ್ದಾರೆ.

ಉಳಿದಂತೆ ಎರಡು ಸ್ಥಾನಗಳಿಗೆ ಬಿಜೆಪಿ ಬೆಂಬಲಿತರು, ಒಬ್ಬರು ಸ್ವತಂತ್ರ ಅಭ್ಯರ್ಥಿ ಆಯ್ಕೆಯಾದರು. ಪರಿಶಿಷ್ಟ ಪಂಗಡ ಸ್ಥಾನ ಖಾಲಿ
ಉಳಿದಿದೆ.

ಜೆಡಿಎಸ್ ಬೆಂಬಲಿತರಾದ ಸಾಮಾನ್ಯ ಕ್ಷೇತ್ರದಿಂದ ಎಸ್. ಸಿದ್ದರಾಜು, ರಾಮದಾಸ್, ಮಹದೇವ, ವೆಂಕಟೇಶ್, ಶಿವಣ್ಣ, ಮಹಿಳಾ ಮೀಸಲು ಸ್ಥಾನದಿಂದ ಬಿ.ಎಸ್. ಸವಿತಾ ಹಾಗೂ ಜಯಲಕ್ಷ್ಮಮ್ಮ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಗೀತಾ, ಹಿಂದುಳಿದ ವರ್ಗ ‘ಎ’ ಮೀಸಲು ಸ್ಥಾನದಿಂದ ಆರ್. ಶಂಕರ್ ಆಯ್ಕೆಯಾದರು.

ADVERTISEMENT

ಹಿಂದುಳಿದ ವರ್ಗ ‘ಬಿ’ ಮೀಸಲು ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಚಿಕ್ಕರಾಜು, ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ವೆಂಕಟೇಶ್, ಲಕ್ಷ್ಮಣ್ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಬಿ. ರಮ್ಯಶ್ರೀ ಕಾರ್ಯ ನಿರ್ವಹಿಸಿದರು. ಎಂಪಿಸಿಎಸ್ ಸಿಇಒ ಗೋವಿಂದು, ಹಾಲು ಪರೀಕ್ಷಕ ಹರ್ಷವರ್ಧನ ಚುನಾವಣೆಗೆ ಸಹಕಾರ ನೀಡಿದರು.

ಬಮೂಲ್ ನಿರ್ದೇಶಕ ಎಚ್.ಸಿ. ಜಯಮುತ್ತು, ಮುಖಂಡರಾದ ಮೆಹರೀಶ್, ಕೆ. ಉಮೇಶ್, ವೆಂಕಟರಾಮು, ಸೀತಾರಾಮು, ಚಂದ್ರೇಗೌಡ, ರಾಮಚಂದ್ರು, ನಾರಾಯಣ ಸ್ವಾಮಿ, ಕಾರ್ತಿಕ್, ಪುಟ್ಟಸ್ವಾಮಿ, ಜಯರಾಮು, ಸಿ. ರಾಮಯ್ಯ, ಜಯರಾಮು, ಉಮೇಶ್, ನಂಜುಂಡೇಗೌಡ, ವಿ.ಇ. ವೆಂಕಟಾಚಲ, ಅನಿಲ್ ಕುಮಾರ್, ಕೆ.ಪಿ. ಪವನ್ ಗೌಡ ನಿರ್ದೇಶಕರನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.