ADVERTISEMENT

ಬಿಡದಿಯಲ್ಲಿ ಉದ್ಯೋಗ ಮೇಳ

​ಪ್ರಜಾವಾಣಿ ವಾರ್ತೆ
Published 26 ಮೇ 2019, 13:26 IST
Last Updated 26 ಮೇ 2019, 13:26 IST
ಉದ್ಯೋಗ ಮೇಳವನ್ನು ಎನ್.ಐ.ಐ.ಟಿ ಫೌಂಡೇಷನ್ ಕ್ಲಸ್ಟರ್ ಮ್ಯಾನೇಜರ್ ಪೂರ್ಣಿಮ ಉದ್ಘಾಟಿಸಿದರು
ಉದ್ಯೋಗ ಮೇಳವನ್ನು ಎನ್.ಐ.ಐ.ಟಿ ಫೌಂಡೇಷನ್ ಕ್ಲಸ್ಟರ್ ಮ್ಯಾನೇಜರ್ ಪೂರ್ಣಿಮ ಉದ್ಘಾಟಿಸಿದರು   

ಬಿಡದಿ: ಹಿಂದೂಸ್ಥಾನ್ ಕೋಕ ಕೋಲ ಬೇವರೇಜಸ್, ಸಿ.ಡಿ.ಸಿ ಮತ್ತು ಎನ್.ಐ.ಐ.ಟಿ ಫೌಂಡೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಬಿಡದಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು.

ಎನ್.ಐ.ಐ.ಟಿ ಫೌಂಡೇಷನ್ ಕ್ಲಸ್ಟರ್ ಮ್ಯಾನೇಜರ್ ಪೂರ್ಣಿಮ ಅವರು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಹಿಂದೂಸ್ಥಾನ್ ಕೋಕ ಕೋಲ ಬೇವರೇಜಸ್, ಸಿ.ಡಿ.ಸಿ ಮತ್ತು ಫೌಂಡೇಷನ್‌ನಿಂದ ಬಿಡದಿ ಸರ್ಕಾರಿ ಶಾಲೆಯಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದೇವೆ. 10ನೇ ತರಗತಿ ಉತ್ತೀರ್ಣರಾದವರಿಂದ ಹಿಡಿದು ಸ್ನಾತಕೋತ್ತರ ಪದವಿ ಪಡೆದಿರುವವರನ್ನು ಮೇಳಕ್ಕೆ ಕರೆದಿದ್ದೇವೆ. 30 ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿವೆ. ಬಿಡದಿ, ಹಾರೋಹಳ್ಳಿ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶಗಳು ಸೇರಿ ವಿವಿಧೆಡೆಯ ಕಂಪನಿಗಳು ಭಾಗವಹಿಸಿವೆ’ ಎಂದು ತಿಳಿಸಿದರು.

ADVERTISEMENT

‘ಮುಖ್ಯವಾಗಿ ಕೋಕ ಕೋಲ ಬೇವರೇಜಸ್ ವತಿಯಿಂದ ಉಚಿತ ತರಬೇತಿ ನೀಡಲಾಗುತ್ತಿದೆ. ಗ್ರಾಮೀಣ ಭಾಗದವರಿಗೆ, ಬಡವರಿಗೆ ಐದು ವರ್ಷಗಳಿಂದ ಕಂಪ್ಯೂಟರ್, ಸ್ಪೋಕನ್ ಇಂಗ್ಲೀಷ್ ವಿವಿಧ ರೀತಿಯ ತರಬೇತಿ ನೀಡಿ ನಿಶ್ಚಿತ ಉದ್ಯೋಗ ನೀಡುತ್ತಿದ್ದೇವೆ. ಇಲ್ಲಿಯವರೆಗೂ ಎರಡು ಸಾವಿರಕ್ಕಿಂತ ಹೆಚ್ಚು ಜನರಿಗೆ ಉಚಿತ ತರಬೇತಿ ನೀಡಿದ್ದೇವೆ. 1,500 ಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.