
ಕಸವನ್ನು ತೆಗೆದು ಸ್ವಚ್ಛಗೊಳಿಸಿರುವ ನಗರಸಭೆಯವರು ರಂಗೋಲಿ ಬಿಟ್ಟು ಕನ್ನಡ ದ್ವಜ ಸ್ತಂಭವನ್ನಿಟ್ಟು ಕಸ ಹಾಕದಂತೆ ಜಾಗೃತಿ ಮೂಡಿಸಿರುವುದು
ಕನಕಪುರ: ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದನ್ನು ತಡೆಗಟ್ಟಲು ನಗರ ಸಭೆಯು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಕಸ ಹಾಕಿದ ಸ್ಥಳವನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ ಸುಂದರಗೊಳಿಸುವ ಮೂಲಕ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಇಲ್ಲಿನ ಸಬ್ ರಿಜಿಸ್ಟರ್ ಕಚೇರಿ ಮುಂಭಾಗದ ತಿರುವು ಸ್ಥಳವು ಕಸ ಹಾಕುವ ಹಾಟ್‌ಸ್ಪಾಟ್ ಆಗಿತ್ತು. ಸಂಜೆವರೆಗೂ ಸ್ವಚ್ಛವಾಗಿದ್ದ ಜಾಗ, ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ಕಸದಿಂದ ತುಂಬಿ ತುಳುಕುತ್ತಿದ್ದು, ಗಬ್ಬು ವಾಸನೆಯ ಜಾಗವಾಗಿತ್ತು.
ಅದನ್ನು ನಿಯಂತ್ರಿಸಲು ನಗರ ಸಭೆಯವರು ಸೋಮವಾರ ಸಮುದಾಯ ಸಂಘಟಿಕರ ತಂಡದೊಂದಿಗೆ ಅಲ್ಲಿದ್ದಂತಹ ಎಲ್ಲಾ ಕಸವನ್ನು ತೆಗೆದು ಸ್ವಚ್ಛಗೊಳಿಸಿ ರಂಗೋಲಿ ಬಿಟ್ಟು ಸುಂದರವಾಗಿ ಕಾಣುವಂತೆ ಮಾಡಿದ್ದಾರೆ.
ಸ್ವಚ್ಛತೆಯ ಜೊತೆಗೆ ಆ ಜಾಗದಲ್ಲಿ ಸಿಸಿಟಿವಿಯನ್ನು ಅಳವಡಿಸಿ ಯಾರು ಕಸ ಹಾಕದಂತೆ 5 ಸಾವಿರ ದಂಡ ವಿಧಿಸುವ ಎಚ್ಚರಿಕೆಯ ನಾಮಫಲಕವನ್ನು ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.