ADVERTISEMENT

ಕನಕಪುರ: ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 8:31 IST
Last Updated 3 ಡಿಸೆಂಬರ್ 2025, 8:31 IST
ಕನಕಪುರ ಕೆಂಕೆರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಿಳಾ ಮುಖಂಡರು ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವಂತೆ ಘೋಷಣೆ ಕೂಗುತ್ತಿರುವುದು
ಕನಕಪುರ ಕೆಂಕೆರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಿಳಾ ಮುಖಂಡರು ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವಂತೆ ಘೋಷಣೆ ಕೂಗುತ್ತಿರುವುದು   

ಕನಕಪುರ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶೀಘ್ರವೇ ಮುಖ್ಯಮಂತ್ರಿಯಾಗಬೇಕು ಎಂದು ಪ್ರಾರ್ಥಿಸಿ ನಗರಸಭೆ ಮಾಜಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಅವರ ನೇತೃತ್ವದಲ್ಲಿ ಕೆಂಕೇರಮ್ಮ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಾಯಿತು. 

ಈ ಪೂಜಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಮಹಿಳೆಯರು ಮತ್ತು ನಗರಸಭೆ ಮಾಜಿ ಸದಸ್ಯರು ಭಾಗವಹಿಸಿದ್ದರು. 

ನಗರದ ಹಲಸಿನಮರದೊಡ್ಡಿಯ ಕೆಂಕೇರಮ್ಮ ದೇವಾಲಯವು ಗ್ರಾಮದ ಶಕ್ತಿ ದೇವತೆ ಹಾಗೂ ಡಿ.ಕೆ.ಶಿವಕುಮಾರ್ ಅವರ ಮನೆ ದೇವರು. ಶಿವಕುಮಾರ್ ಅವರು ರಾಜಕೀಯವಾಗಿ ಯಾವುದೇ ಕೆಲಸ ಕೈಗೊಳ್ಳುವ ಮುನ್ನ ಮೊದಲು ಇಲ್ಲಿ ಪೂಜೆ ಸಲ್ಲಿಸುತ್ತಾರೆ. 

ADVERTISEMENT

ಪೂಜೆಯ ನೇತೃತ್ವ ವಹಿಸಿದ್ದ ಲಕ್ಷ್ಮಿ ದೇವಮ್ಮ ಮಾತನಾಡಿ, ಶಿವಕುಮಾರ್ ಅವರು ತಮ್ಮ ಶ್ರಮದಿಂದ ರಾಜಕೀಯ ಹೋರಾಟಗಳ ಮೂಲಕ ಜಿಲ್ಲಾ ಪಂಚಾಯಿತಿಯಿಂದ ಸಚಿವ ಸ್ಥಾನದವರೆಗೆ ಶ್ರಮಪಟ್ಟು ಮುಂದೆ ಬಂದಿದ್ದಾರೆ. ಅವರನ್ನು ಮುಖ್ಯಮಂತ್ರಿಯಾಗಿ ನೋಡಬೇಕು ಎಂಬ ಆಕಾಂಕ್ಷೆ ಇದೆ. ಡಿ.ಕೆ. ಶಿವಕುಮಾರ್ ಮನುಸು ಮಾಡಿದರೆ, 2023ರಲ್ಲೇ ಮುಖ್ಯಮಂತ್ರಿಯಾಗಬಹುದಿತ್ತು ಎಂದರು. 

ಕಾಂಗ್ರೆಸ್‌ನ ಮಹಿಳಾ ನಾಯಕಿಯರಾದ ರೋಹಿಣಿ ಪ್ರಿಯ, ಮಹದೇವಮ್ಮ, ರೂಪಾ, ಸರಳ, ನಾಗರತ್ನಮ್ಮ, ಸುಧಾ, ಶೋಭಾ, ಬಿ.ಕೆ.ಪ್ರಭಾ, ರತ್ನಮ್ಮ, ಸಾತನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹರೀಶ್, ಜಗದೀಶ್, ಕಿರಣ್ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.