ADVERTISEMENT

ಕನ್ನಡ ಕಹಳೆ ಮೊಳಗಿಸಿದ ಕುವೆಂಪು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 13:31 IST
Last Updated 29 ಡಿಸೆಂಬರ್ 2019, 13:31 IST
ವಿಶ್ವಮಾನವ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿ ಗೋವಿಂದು ಮಾತನಾಡಿದರು
ವಿಶ್ವಮಾನವ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿ ಗೋವಿಂದು ಮಾತನಾಡಿದರು   

ರಾಮನಗರ: ಅದ್ಭುತ ಕಾವ್ಯವನ್ನು ಹಾಗೂ ಸಮಾಜಮುಖಿ ಆಶಯಗಳ ಸಾಹಿತ್ಯ ಕೊಟ್ಟವರು ರಾಷ್ಟ್ರಕವಿ ಕುವೆಂಪು ಎಂದು ಹೋಲಿ ಕ್ರೆಸೆಂಟ್ ಇಂಗ್ಲಿಷ್ ಮಾಧ್ಯಮ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಅಲ್ತಾಫ್ ಅಹಮದ್ ಹೇಳಿದರು.

ಇಲ್ಲಿನ ಹೋಲಿ ಕ್ರೆಸೆಂಟ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಭಾನುವಾರ ವಿಶ್ವಮಾನವ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕುವೆಂಪು ಅವರು ಸಾಹಿತ್ಯದ ಮೂಲಕ ಕನ್ನಡ ನಾಡುನುಡಿಯ ಬಗ್ಗೆ ಸಿಂಹಕಹಳೆ ಮೊಳಗಿಸಿ ಕನ್ನಡ ಡಿಂಡಿಮ ಬಾರಿಸಿದರು. ಕಾವ್ಯಗಳ ಮೂಲಕ ಉಲ್ಲಾಸ, ಉತ್ಸಾಹ ತಂದು ಕೊಟ್ಟ ದೊಡ್ಡ ಪ್ರತಿಭೆ ಎಂದು ಬಣ್ಣಿಸಿದರು.

ADVERTISEMENT

ಸಂಪನ್ಮೂಲ ವ್ಯಕ್ತಿ ಗೋವಿಂದು ಮಾತನಾಡಿ, ಕನ್ನಡದ ಬಗ್ಗೆ ಎಲ್ಲರಲ್ಲೂ ಅಭಿಮಾನ ಮೂಡಿಸಿದ ಕುವೆಂಪು ಪ್ರತಿಯೊಂದು ಪದ್ಯಗಳಲ್ಲಿ ಸಂದೇಶವನ್ನು ಮುಟ್ಟಿಸಿದರು. ಕುವೆಂಪು ಅವರ ಸಂದೇಶ, ಮೌಲ್ಯಗಳನ್ನು ಜನರಿಗೆ ತಲುಪಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಆಶಿಸಿದರು.

ಮಾನವೀಯ ಮೌಲ್ಯಗಳನ್ನು ಸಾಹಿತ್ಯದ ಮೂಲಕ ಮನವರಿಕೆ ಮಾಡಿಕೊಟ್ಟು ಸಾಹಿತ್ಯ ಲೋಕವನ್ನು ಕುವೆಂಪು ಶ್ರೀಮಂತಗೊಳಿಸಿದರು ಎಂದು ತಿಳಿಸಿದರು.

ಅಮೃತ ವಿಕಲಚೇತನ ಚಾರಿಟಬಲ್ ಟ್ರಸ್ಟ್‌ನ ಕಾರ್ಯದರ್ಶಿ ಟಿ. ರಮೇಶ್, ಖಜಾಂಚಿ ಸ್ವಪ್ನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.