ADVERTISEMENT

ನಿರಾಶ್ರಿತರಿಗೆ ಪೊಲೀಸರಿಂದ ಊಟದ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 1 ಮೇ 2021, 7:36 IST
Last Updated 1 ಮೇ 2021, 7:36 IST
ಕನಕಪುರದಲ್ಲಿ ನಿರಾಶ್ರಿತರಿಗೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ.ಕೃಷ್ಣ ಊಟದ ಪೊಟ್ಟಣವನ್ನು ವಿತರಿಸಿದರು
ಕನಕಪುರದಲ್ಲಿ ನಿರಾಶ್ರಿತರಿಗೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ.ಕೃಷ್ಣ ಊಟದ ಪೊಟ್ಟಣವನ್ನು ವಿತರಿಸಿದರು   

ಕನಕಪುರ: ಕೋವಿಡ್‌ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿರುವ ಪೊಲೀಸರು, ಊಟವಿಲ್ಲದೆ ಪರದಾಡುತ್ತಿದ್ದವರಿಗೆ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ತಾಲ್ಲೂಕಿನಲ್ಲಿ ಲಾಕ್‌ಡೌನ್‌ ಮಾಡಿರುವುದರಿಂದ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದವರು, ಅನಾಥರು ಮೂರು ದಿನಗಳಿಂದ ಊಟದ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದರು. ಇದನ್ನು ಗಮನಿಸಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ.ಕೃಷ್ಣ ಅವರು ಅನ್ನ ಸಾಂಬಾರು ಪೊಟ್ಟಣ ಕಟ್ಟಿಸಿ ನಿರಾಶ್ರಿತರು ಎಲ್ಲಿದ್ದಾರೋ ಅಲ್ಲಿಗೆ ಹುಡುಕಿಕೊಂಡು ಹೋಗಿ ಅನ್ನದ ಪೊಟ್ಟಣ ವಿತರಣೆ ಮಾಡಿದರು.

ಬೀಗ ಮುದ್ರೆ: ಕೋವಿಡ್‌ ನಿಯಮ ಉಲ್ಲಂಘನೆ ಮಾಡಿ ವ್ಯಾಪಾರ ಮಾಡುತ್ತಿದ್ದ ವೈನ್‌ಸ್ಟೋರ್‌ನ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಮಳಿಗೆಯನ್ನು ಸೀಜ್‌ ಮಾಡಿದ್ದಾರೆ.

ADVERTISEMENT

ಇಲ್ಲಿನ ಮೇಗಳಬೀದಿ ವಿನಾಯಕ ಬಾರ್‌ನಲ್ಲಿ ಕ್ಯಾಷಿಯರ್‌ ಮಾಸ್ಕ್‌ ಧರಿಸದೆ ವ್ಯಾಪಾರ ವಹಿವಾಟು ನಡೆಸುತ್ತಿದ್ದರಿಂದ ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌, ನಗರಸಭೆ ಅಧ್ಯಕ್ಷ ಮುಕ್ಬುಲ್‌ಪಾಷ ಹಾಗೂ ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ.ಕೃಷ್ಣ ಕಾನೂನು ಕ್ರಮ ಜರುಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.