ADVERTISEMENT

ಮಾಗಡಿ: ಮಠದ 5 ಎಕರೆ ವೈದ್ಯ ಪರಿಷತ್‌ಗೆ ಭೂದಾನ

ಪಾಲನಹಳ್ಳಿ ಶ್ರೀ ಮಾಹಿತಿ

​ಪ್ರಜಾವಾಣಿ ವಾರ್ತೆ
Published 5 ಮೇ 2025, 13:55 IST
Last Updated 5 ಮೇ 2025, 13:55 IST
ಮಾಗಡಿ ತಾಲ್ಲೂಕಿನ ಸೋಲೂಕು ಹೋಬಳಿಯ ಪಾಲನಹಳ್ಳಿ ಮಠದ ಶ್ರೀ ಪಾರಂಪರಿಕ ವೈದ್ಯ ಪರಿಷತ್‌ಗೆ ಐದು ಎಕರೆ ಜಮೀನು ದಾನ ಮಾಡಿದರು
ಮಾಗಡಿ ತಾಲ್ಲೂಕಿನ ಸೋಲೂಕು ಹೋಬಳಿಯ ಪಾಲನಹಳ್ಳಿ ಮಠದ ಶ್ರೀ ಪಾರಂಪರಿಕ ವೈದ್ಯ ಪರಿಷತ್‌ಗೆ ಐದು ಎಕರೆ ಜಮೀನು ದಾನ ಮಾಡಿದರು    

ಮಾಗಡಿ: ಸಮಾಜದ ಒಳಿತಿಗಾಗಿ ಪಾಲನಹಳ್ಳಿ ಮಠ ರಾಜ್ಯದ ಪಾರಂಪರಿಕ ಆರ್ಯುವೇದ ವೈದ್ಯ ಪದ್ಧತಿ ಉಳಿಸಿ ಬೆಳೆಸಲು ಮಠದ ಐದು ಎಕರೆ ಜಮೀನನ್ನು ಕರ್ನಾಟಕ ರಾಜ್ಯ ಪಾರಂಪರಿಕ ವೈದ್ಯ ಪರಿಷತ್ ದಾನವಾಗಿ ನೀಡಿದೆ.

ತಾಲ್ಲೂಕಿನ ಸೋಲೂರಿನ ಪಾಲನಹಳ್ಳಿ ಮಠದಲ್ಲಿ ಪಾರಂಪರಿಕ ವೈದ್ಯ ಪರಿಷತ್‌ಗೆ ಉಯಿಲು ಪತ್ರ ಹಸ್ತಾಂತರಿಸಿ ಸಿದ್ದರಾಜು ಶ್ರೀ, ಕೆರೆ‌ ನೀರು ಕೆರೆಗೆ ಚೆಲ್ಲುವ ಎಂಬ ಮಾತಿನಂತೆ ಮಠ ಲೋಕ ಕಲ್ಯಾಣಾರ್ಥವಾಗಿ ರಾಜ್ಯದಲ್ಲಿ ಪಾರಂಪರಿಕ ಆರೋಗ್ಯ ಪದ್ಧತಿ ಉಳಿಸಿ ಬೆಳೆಯಲು ಮತ್ತು ದೇಸಿ ಆರೋಗ್ಯ ಪದ್ಧತಿಯ ಜೀವನಶೈಲಿ ಉಳಿಸಲು ನಿರ್ಧಾರ ಕೈಗೊಂಡಿದೆ ಎಂದರು.

ಮಹಾರಾಜರು ದಾನ ನೀಡಿದ್ದರು: ಮೈಸೂರಿನ ಮಹಾರಾಜರು ದೇವಾಲಯಕ್ಕೆಂದು ನೀಡಿದ್ದ ಐದು ಎಕರೆ ಜಮೀನನ್ನು ಪಾರಂಪರಿಕ ವೈದ್ಯ ಪರಿಷತ್‌ಗೆ ನೀಡಲಾಗಿದೆ. ಪಾಲನಹಳ್ಳಿ ದೇವಸ್ಥಾನದ ಟ್ರಸ್ಟ್ ಸದಸ್ಯರ ಸರ್ವಾನುಮತ ಒಪ್ಪಿಗೆ ಸಿಕ್ಕಿದ್ದು ಭೂಮಿಯನ್ನು ದಾನವಾಗಿ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿದ್ದರಾಜು ಸ್ವಾಮೀಜಿ ತಿಳಿಸಿದರು.

ADVERTISEMENT

ಪಾರಂಪರಿಕ ವೈದ್ಯ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಮಹಾದೇವ್ ಮಾತನಾಡಿ, ಶ್ರೀಮಠದಿಂದ ಬಂದಿರುವ ಜಮೀನಿನಲ್ಲಿ ಪಾರಂಪರಿಕ ವೈದ್ಯ ಪರಿಷತ್ ಕಚೇರಿ ನಿರ್ಮಾಣ ಹಾಗೂ ಗಿಡಮೂಲಿಕೆ ವನ ಹಾಗೂ ಅಳಿವಿನಂಚಿನಲ್ಲಿರುವ ಸಸ್ಯಗಳನ್ನು ಉಳಿಸುವ ಕೆಲಸ ಮಾಡಲಾಗುವುದು ಎಂದರು.

ಪಾರಂಪರಿಕ ವೈದ್ಯ ಪರಿಷತ್ ಶಂಕರಪ್ಪ ಮಾತನಾಡಿ, ಗಿಡಮೂಲಿಕೆ ಗುರುತಿಸಿ ಉಪಯೋಗಿಸುವ ಕಲೆಯನ್ನು ಇಂದಿನ ತಲೆಮಾರಿಗೆ ಕಲಿಸುವ ಜವಾಬ್ದಾರಿ ಪಾರಂಪರಿಕ ವೈದ್ಯ ಪರಿಷತ್ ಮೇಲಿದೆ ಎಂದರು.

ಪಾರಂಪರಿಕ ವೈದ್ಯ ಪರಿಷತ್‌ ಖಜಾಂಚಿ ಶಿವಾನಂದ, ಜಂಗಮಠ, ದಯಾನಂದ, ಮೋಹನಸ್ವಾಮಿ, ವೈದ್ಯಪರಿಷತ್‌ ನಿಕಟ ಪೂರ್ವ ಅಧ್ಯಕ್ಷ ಗುರುಸಿದ್ದಪ್ಪ, ಸದಾಶಿವಯ್ಯ, ಶಿವಲಿಂಗಯ್ಯ, ಸುರೇಶ್, ಶಿವಣ್ಣ, ಬಸವರಾಜು, ಮಳೆಕೋಟೆ ಶಿವಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.