
ಮಾಗಡಿ: ಚಿರತೆ ಸೊಂಟಕ್ಕೆ ತಂತಿಯೊಂದು ಸುತ್ತಿಕೊಂಡು ಬೇವಿನ ಮರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದೆ. ತಾಲ್ಲೂಕಿನ ಕಲ್ಯಾ ಬಳಿ ಚಂದೂರಾಯನಹಳ್ಳಿ ಶ್ರೀನಿವಾಸ್ ಅವರ ತೋಟದಲ್ಲಿ ಈ ಘಟನೆ ನಡೆದಿದೆ.
ಸೊಂಟಕ್ಕೆ ತಂತಿ ಸುತ್ತಿ ಹಾಕಿಕೊಂಡು ಅಸ್ವಸ್ಥ ಸ್ಥಿತಿಯಲ್ಲಿದ್ದ 1 ವರ್ಷದ ಗಂಡು ಚಿರತೆ ಬೇವಿನ ಮರದ ಮೇಲಿಂದ ಕೆಳಗೆ ಬಿದ್ದಿದೆ.
ಹಲವು ದಿನಗಳ ಹಿಂದೆ ಗ್ರಾಮದ ಸುತ್ತಮುತ್ತ ಪ್ರತ್ಯಕ್ಷವಾಗಿ ನಾಗರಿಕರಿಗೆ ಭಯ ಉಂಟು ಮಾಡಿತ್ತು. ಈ ಸಂಬಂಧ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಇಟ್ಟು ಚಿರತೆ ಸೆರೆ ಹಿಡಿಯಲು ಮುಂದಾಗಿದ್ದರು.
ಸ್ಥಳಕ್ಕೆ ಡಿಎಫ್‌ಒ ರಾಮಕೃಷ್ಣಪ್ಪ, ವಲಯ ಅರಣ್ಯಾಧಿಕಾರಿ ಚೈತ್ರಾ, ಎಸಿಎಫ್ ಪುಟ್ಟಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.