ಚನ್ನಪಟ್ಟಣ: ತಾಲ್ಲೂಕಿನ ಮೈಲನಾಯಕನ ಹೊಸಹಳ್ಳಿ ಗ್ರಾಮದಲ್ಲಿ ಗುರುವಾರ ಕುಡಿಯುವ ನೀರು ಎಂದು ತಿಳಿದು ಕ್ರಿಮಿನಾಶಕ ಬೆರೆಸಿದ ನೀರನ್ನು ಕುಡಿದು ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ.
ನವೀನ್ (35) ಮೃತಪಟ್ಟವರು. ಇವರು ಚನ್ನಪಟ್ಟಣ ನಗರದ ಕೋಟೆ ನಿವಾಸಿ ಅರ್ಕೇಶ್ ಅವರ ಮಗ. ಗುರುವಾರ ಪತ್ನಿಯ ತವರೂರು ಮೈಲನಾಯಕನ ಹೊಸಹಳ್ಳಿಗೆ ಹೋಗಿದ್ದ ನವೀನ್
ಪತ್ನಿಯ ತವರೂರು ಮೈಲನಾಯಕನ ಹೊಸಹಳ್ಳಿಗೆ ಆಗಾಗ ತೆರಳುತ್ತಿದ್ದ ನವೀನ್, ಗುರುವಾರ ಗ್ರಾಮದಲ್ಲಿ ತಮ್ಮ ಮಾವನ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಆಗ ಬಾಯಾರಿಕೆಯಾಗಿ ತೋಟದಲ್ಲಿ ಬಾಟಲಿಯಲ್ಲಿ ಇಟ್ಟಿದ್ದ ನೀರನ್ನು ಕುಡಿಯುವ ನೀರು ಎಂದು ತಿಳಿದು ಕುಡಿದಿದ್ದಾರೆ. ಆ ಬಾಟಲಿಯಲ್ಲಿ ಬೆಳೆಗೆ ಸಿಂಪಡಿಸಲು ತಂದಿದ್ದ ಕ್ರಿಮಿನಾಶಕ ಬೆರೆಸಿದ್ದ ನೀರಾಗಿತ್ತು ಎಂದು ತಿಳಿದುಬಂದಿದೆ.
ಆನಂತರ ತೀವ್ರ ಅಸ್ವಸ್ಥರಾದ ನವೀನ್ ತಕ್ಷಣವೇ ಮನೆಯವರಿಗೆ ಮೊಬೈಲ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಮನೆಯವರು ಆಸ್ಪತ್ರೆಗೆ ಸಾಗಿಸಿದ್ದಾರೆ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ತಾಲ್ಲೂಕಿನ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.