ADVERTISEMENT

29ರಂದು ಮಂಕುತಿಮ್ಮನ ಕಗ್ಗ ಗಾಯನ ಕಂಠಪಾಠ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 2:41 IST
Last Updated 21 ನವೆಂಬರ್ 2019, 2:41 IST

ಮಾಗಡಿ: ಡಿ.ವಿ.ಜಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಡಿವಿಜಿ ಅವರ 135ನೇ ಸಂಸ್ಮರಣೆ ಅಂಗವಾಗಿ ನ.29ರಂದು ಪಟ್ಟಣದ ಬಿಜಿಎಸ್‌ ಕಾಲೇಜಿನ ಆವರಣದಲ್ಲಿ ರಾಜ್ಯಮಟ್ಟದ ಕಗ್ಗ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಸಿ.ಬಿ.ಅಶೋಕ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

8ರಿಂದ 12 ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿಜೇತರಿಗೆ ₹7,500 (ಪ್ರಥಮ), ₹5 ಸಾವಿರ (ದ್ವಿತೀಯ), ₹2, 500 (ತೃತೀಯ) ನಗದು ಬಹುಮಾನ ನೀಡಲಾಗುವುದು.

ನ.27ರ ಒಳಗೆ ನೋಂದಣಿ ಮಾಡಿಕೊಳ್ಳಬೇಕು. ಆಸಕ್ತರು ಮೊಬೈಲ್‌ 99641 71910 ಇಲ್ಲಿಗೆ ಸಂಪರ್ಕಿಸಲು ಕೋರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.