ADVERTISEMENT

‘ಹಲಸಿನಿಂದ ಹಲವು ಲಾಭ’

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 13:17 IST
Last Updated 20 ಆಗಸ್ಟ್ 2019, 13:17 IST
ಮಾಗಡಿ ತಾಲ್ಲೂಕಿನ ಹಸಲಬೆಲೆಯಲ್ಲಿ ಕೆವಿಕೆ ವತಿಯಿಂದ ಮಂಗಳವಾರ ನಡೆದ ‘ಹಲಸಿನ ಮೌಲ್ಯವರ್ಧನೆ ತರಬೇತಿ’ಯಲ್ಲಿ ವಿಜ್ಞಾನಿ ಡಾ.ಲತಾ.ಆರ್‌.ಕುಲಕರ್ಣಿ ಮಾತನಾಡಿದರು
ಮಾಗಡಿ ತಾಲ್ಲೂಕಿನ ಹಸಲಬೆಲೆಯಲ್ಲಿ ಕೆವಿಕೆ ವತಿಯಿಂದ ಮಂಗಳವಾರ ನಡೆದ ‘ಹಲಸಿನ ಮೌಲ್ಯವರ್ಧನೆ ತರಬೇತಿ’ಯಲ್ಲಿ ವಿಜ್ಞಾನಿ ಡಾ.ಲತಾ.ಆರ್‌.ಕುಲಕರ್ಣಿ ಮಾತನಾಡಿದರು   

ಮಾಗಡಿ: ‘ಹಲಸಿನ ಕಾಯಿ, ಹಣ್ಣು, ಬೀಜಗಳಿಂದ ಮೌಲ್ಯವರ್ಧಿತ ಪದಾರ್ಥಗಳನ್ನು ತಯಾರಿಸಿ ಮಹಿಳೆಯರು ಲಾಭ ಗಳಿಸಬಹುದು’ ಎಂದು ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕಿ ಡಾ. ಲತಾ ಆರ್. ಕುಲಕರ್ಣಿ ತಿಳಿಸಿದರು.

ಇಲ್ಲಿನ ಹಲಸಬೆಲೆ ಗ್ರಾಮದಲ್ಲಿ ಮಂಗಳವಾರ ಕೆವಿಕೆ ವತಿಯಿಂದ ಗ್ರಾಮದ ಸ್ವಸಹಾಯ ಸಂಘಗಳ ಸದಸ್ಯರಿಗೆ ಹಲಸಿನಲ್ಲಿ ವಿವಿಧ ಮೌಲ್ಯವರ್ಧಿತ ಪದಾರ್ಥಗಳ ತಯಾರಿಕೆ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಗ್ರಾಮವನ್ನು ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಸ್ವಚ್ಛತೆ, ಆರೋಗ್ಯ, ಸಾಮಾಜಿಕ ನಿಲುವು ಮತ್ತು ಇತರೆ ವಿಭಾಗಗಳಲ್ಲಿ ಸ್ವಾವಲಂಬಿಯನ್ನಾಗಿ ಮಾಡಿ, ಇಡೀ ಜಿಲ್ಲೆಗೆ ಮಾದರಿಯಾಗಿಸಲು, ಕೃಷಿ ವಿಜ್ಞಾನ ಕೇಂದ್ರವು ಹಲಸಬೆಲೆ ಗ್ರಾಮವನ್ನು ದತ್ತು ತೆಗೆದುಕೊಂಡಿದೆ. ಹಲಸು ನಾರಿನಾಂಶ, ಬೀಟಾ ಕೆರೋಟಿನ್, ಖನಿಜ, ಲವಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದು ಆರೋಗ್ಯಕ್ಕೆ ತುಂಬಾ ಒಳ್ಳೆಯದು’ ಎಂದು ತಿಳಿಸಿದರು.

ADVERTISEMENT

ತೊಳೆ ಕತ್ತರಿಸುವ ಸಾಧನದ ಬಳಕೆಯನ್ನು ರೈತರಿಗೆಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು. ಹಲಸಿನ ಉತ್ಪನ್ನಗಳ ಮಾರುಕಟ್ಟೆಗೆ ಅಗತ್ಯವಿರುವ ಲೈಸನ್ಸ್, ಪ್ಯಾಕಿಂಗ್ ಹಾಗೂ ಮಾರುಕಟ್ಟೆ ಸಂಪರ್ಕ ಕುರಿತು ಮಾಹಿತಿ ನೀಡಿದರು. ಹಲಸಬೆಲೆ ಗ್ರಾಮದ ಸ್ವಸಹಾಯ ಸಂಘಗಳ ಸದಸ್ಯರು, ರೈತ ಮಹಿಳೆಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.