ADVERTISEMENT

ಮಾಗಡಿ: ರೈತರ ಷೇರು ಹಣದಲ್ಲಿ ರಾಗಿ ಗೋದಾಮು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 14:32 IST
Last Updated 24 ಸೆಪ್ಟೆಂಬರ್ 2024, 14:32 IST
ಮಾಗಡಿ ತಾಲ್ಲೂಕಿನ ಕಲ್ಯ ವಿಎಸ್ಎಸ್ ಎನ್ ವಾರ್ಷಿಕ ಸಭೆಯನ್ನು ಸಂಘದ ಅಧ್ಯಕ್ಷ ಕೆ. ಹನುಮಂತೇಗೌಡ ಉದ್ಘಾಟಿಸಿದರು.
ಮಾಗಡಿ ತಾಲ್ಲೂಕಿನ ಕಲ್ಯ ವಿಎಸ್ಎಸ್ ಎನ್ ವಾರ್ಷಿಕ ಸಭೆಯನ್ನು ಸಂಘದ ಅಧ್ಯಕ್ಷ ಕೆ. ಹನುಮಂತೇಗೌಡ ಉದ್ಘಾಟಿಸಿದರು.   

ಮಾಗಡಿ : ತಾಲ್ಲೂಕಿನ ಕಲ್ಯ ವಿಎಸ್ಎಸ್ ಎನ್ ಸಹಕಾರಿ ಸಂಘದ ವತಿಯಿಂದ ರೈತರ ಷೇರು ಡಿವಿಡೆಂಟ್ ಹಣದಲ್ಲಿ ಐದು ಗುಂಟೆ ಜಾಗದಲ್ಲಿ ರಾಗಿ ಗೋದಮು ನಿರ್ಮಾಣ ಮಾಡಲು ಜಾಗ ಖರೀದಿಗೆ ಸಭೆಯಲ್ಲಿ ಒಪ್ಪಿಗೆ ಪಡೆಯಲಾಯಿತು.

ತಾಲ್ಲೂಕಿನ ಕಲ್ಯ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಅಧ್ಯಕ್ಷ ಹಾಗೂ ನಿರ್ದೇಶಕರ ಸಮ್ಮುಖದಲ್ಲಿ ರೈತ ಮುಖಂಡರಿಂದ ತೀರ್ಮಾನ ತೆಗೆದುಕೊಳ್ಳಲಾಯಿತು. ಸಂಘದ ನಿರ್ದೇಶಕ ನಾರಾಯಣಪ್ಪ ₹ 8 ಲಕ್ಷ ಷೇರು ಡಿವಿಡೆಂಟ್ ಹಣ ಹಾಗೂ ಬಿಡಿಸಿಸಿ ಬ್ಯಾಂಕಿನಲ್ಲಿ ₹ 40 ಲಕ್ಷ ಷೇರು ಹಣವಿದೆ. ರೈತರು ತಾವು ಬೆಳೆದ ರಾಗಿಯನ್ನು ಸರ್ಕಾರಕ್ಕೆ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಸೋಲೂರಿಗೆ ತೆರುಳುವ ಸ್ಥಿತಿ ಇದ್ದು, ಈ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಷೇರು ಡಿವಿಡೆಂಟ್ ಹಣದಲ್ಲಿ ಐದು ಗುಂಟೆ ಜಾಗ ಖರೀದಿಸಿ, ಅದರಲ್ಲಿ ಗೋದಾಮು ನಿರ್ಮಾಣ ಮಾಡಲು ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಕೆ.ಧನಂಜಯ ಹಾಗೂ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ವಿ.ಸ್ವಾಮಿ ಮಾತನಾಡಿ, ಸಂಘದ ಒಟ್ಟು ಸದಸ್ಯರ ಸಂಖ್ಯೆ, ನೀಡಲಾದ ಒಟ್ಟು ಸಾಲದ ಮೌಲ್ಯ ಹಾಗೂ ಪ್ರಸಕ್ತ ಸಾಲಿನ ನಿವ್ವಳ ಲಾಭದ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ಕೆ.ಹನುಮಂತ್ ಗೌಡ ಮಾತನಾಡಿದರು. ಸಂಘದ ಉಪಾಧ್ಯಕ್ಷ ರಾಮಣ್ಣ, ನಿರ್ದೇಶಕರಾದ ಎಚ್.ಸಿ.ಪುಟ್ಟ ಹೊನ್ನಯ್ಯ, ಚಿಕ್ಕೇಗೌಡ, ಹೆಚ್‌.ಜಿ. ಚಿಕ್ಕಣ್ಣ, ಎಚ್.ಆರ್.ಗಂಗಾಧರಯ್ಯ, ಕೆ.ಎನ್.ವಿಶ್ವನಾಥ, ಎಚ್‌.ಜಿ. ನೀಲಾಂಬಿಕೆ, ಶಾರದಮ್ಮ, ಮುನಿ ನರಸಿಂಹಯ್ಯ, ಸಹಾಯಕ ಗುರು ಸೇರಿದಂತೆ ಇತರರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.