ADVERTISEMENT

ಕನಕಪುರ | ಒಡೆದ ನೀರಿನ ಪೈಪ್‌ ಸರಿಪಡಿಸಿದ ನಗರಸಭೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2023, 5:50 IST
Last Updated 28 ಸೆಪ್ಟೆಂಬರ್ 2023, 5:50 IST
ಕನಕಪುರ ನವಗ್ರಹ ರಸ್ತೆಯಲ್ಲಿ ಒಡೆದಿದ್ದ ನೀರಿನ ಪೈಪ್‌ ಅನ್ನು ಬುಧವಾರ ನಗರಸಭೆ ಸಿಬ್ಬಂದಿ ಸರಿಪಡಿಸಿದರು
ಕನಕಪುರ ನವಗ್ರಹ ರಸ್ತೆಯಲ್ಲಿ ಒಡೆದಿದ್ದ ನೀರಿನ ಪೈಪ್‌ ಅನ್ನು ಬುಧವಾರ ನಗರಸಭೆ ಸಿಬ್ಬಂದಿ ಸರಿಪಡಿಸಿದರು   

ಕನಕಪುರ: ಇಲ್ಲಿನ ನವಗ್ರಹ ರಸ್ತೆಯಲ್ಲಿ‌ ಒಡೆದಿದ್ದ ಕುಡಿಯುವ ನೀರಿನ ಪೈಪ್ ಅನ್ನು ನಗರಸಭೆ ಸಿಬ್ಬಂದಿ ಬುಧವಾರ ಸರಿಪಡಿಸಿದ್ದಾರೆ.

ಕೆಎನ್‌ಎಸ್‌ ವೃತ್ತದಿಂದ ಎಂಎಚ್‌ಎಸ್‌ ಮೈದಾನಕ್ಕೆ ಹೋಗುವ ನವಗ್ರಹ ರಸ್ತೆಯಲ್ಲಿ ನೀರಿನ ಪೈಪ್‌ ಒಡೆದು ನಾಲ್ಕು ದಿನಗಳಿಂದ ಕುಡಿಯುವ ನೀರಿನ ವ್ಯರ್ಥವಾಗಿ ರಸ್ತೆಯಲ್ಲಿ ಹರಿಯುತ್ತಿತ್ತು.  ರಸ್ತೆಯ ನಿವಾಸಿಗಳು ನೀರಿನ ಪೈಪ್‌ ಒಡೆದಿರುವ ಬಗ್ಗೆ ರಸ್ತೆಯ ನಿವಾಸಿಗಳು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ.

ಈ ಕುರಿತು ಸೆ. 27ರಂದು ‘ಒಡೆದ ಪೈಪ್: ನೀರು ಪೋಲು’ ಶೀರ್ಷಿಕೆಯಡಿ ಪ್ರಜಾವಾಣಿ ವರದಿ ಪ್ರಕಟಿಸಿತ್ತು. 

ADVERTISEMENT

ವರದಿ ಪ್ರಕಟವಾದ ಬಳಿಕ ಎಚ್ಚೆತ್ತುಗೊಂಡ ನಗರಸಭೆ ಅಧಿಕಾರಿಗಳು, ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ರಸ್ತೆಯ ಕಾಂಕ್ರೀಟ್  ಕತ್ತರಿಸಿ ಅದರಡಿಯಲ್ಲಿ ಒಡೆದಿದ್ದ ನೀರಿನ ಪೈಪ್ ಅನ್ನು ನಗರಸಭೆ ಸಿಬ್ಬಂದಿ ಸರಿ‍ಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.