ಹಾರೋಹಳ್ಳಿ ತಾಲ್ಲೂಕಿನಲ್ಲಿ ದಸರಾ ಹಬ್ಬದ ಪ್ರಯುಕ್ತ ಗೊಂಬೆ ಪ್ರದರ್ಶನ ನಡೆಯಿತು
ಹಾರೋಹಳ್ಳಿ: ತಾಲ್ಲೂಕಿನ ಗಂಟಕನದೊಡ್ಡಿ ದಿ ಆರೋ ಸ್ಕೂಲ್ ಆವರಣದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಪೋಷಕರಿಗೆ ದಸರಾ ಗೊಂಬೆ ಸ್ಪರ್ಧೆ ಏರ್ಪಡಿಸಲಾಗಿತ್ತು.
ಶನಿವಾರ ದಸರಾ ಗೊಂಬೆ ಸ್ಪರ್ಧೆಯಲ್ಲಿ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.
ಪ್ರಾಶುಪಾಲರಾದ ಪಾರ್ವತಿ ಮಾತನಾಡಿ, ದಸರಾ ಹಬ್ಬದ ಪ್ರಯುಕ್ತ ಮನೆಗಳಲ್ಲಿ ಗೊಂಬೆ ಕೂರಿಸುವ ಸಂಪ್ರದಾಯ ನಡೆಯುತ್ತಿದೆ. ಅದರಂತೆ ಮುಂದಿನ ಪೀಳಿಗೆಗೆ ಗೊಂಬೆಗಳ ಜೋಡನೆ ಮತ್ತು ಪ್ರದರ್ಶನದ ಕಲಾತ್ಮಕತೆ, ವೈಶಿಷ್ಟತೆ ಪ್ರೋತ್ಸಾಹಿಸುವ ಒಂದು ಸ್ಪರ್ಧೆ ಇದಾಗಿದೆ. ಸ್ಪರ್ಧಿಸುವ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು ಎಂದರು.
ಇಂದು ಪ್ರದರ್ಶಿಸಿರುವ ಗೊಂಬೆಗಳು ಭಾರತೀಯ ಸಂಸ್ಕೃತಿ, ಆಚಾರ ವಿಚಾರ, ಧಾರ್ಮಿಕ ಪರಂಪರೆ ಅನಾವರಣಗೊಳಿಸಿದೆ. ನವರಾತ್ರಿ ವೇಳೆ ಗೊಂಬೆ ಜೋಡಿಸಿ ಸಂಪ್ರದಾಯ ಮುಂದುವರಿಸಿಕೊಂಡು ಹೋಗಬೇಕು ಎಂದರು.
ಸ್ಪರ್ಧೆಯಲ್ಲಿ ಪೋಷಕರಾದ ವಾತ್ಸಲ್ಯ, ವಾಮಿಕ, ವಿಲಾಸ ಹಾಗೂ ವಿಶಿಷ್ಟ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಮುಖ್ಯಸ್ಥ ಅಜೀತ್, ಕಾರ್ಯದರ್ಶಿ ರವಿಶಂಕರ್ ಸೇರಿದಂತೆ ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.