ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದ 6 ಅಭ್ಯರ್ಥಿಗಳ 7 ನಾಮಪತ್ರಗಳು ತಿರಸ್ಕೃತವಾಗಿವೆ. ಒಟ್ಟು 45 ನಾಮಪತ್ರ ಸ್ವೀಕೃತಗೊಂಡಿದ್ದು, 38 ನಾಮಪತ್ರಗಳು ಅಂಗೀಕಾರವಾಗಿವೆ.
ಸ್ವತಂತ್ರ ಅಭ್ಯರ್ಥಿಗಳಾದ ಪ್ರದೀಪ್ ಟಿ.ವಿ-1 ನಾಮಪತ್ರ, ಶಿವಣ್ಣ 1 ನಾಮಪತ್ರ, ಬಂಡಿ ರಂಗನಾಥ ವೈ.ಆರ್. 1 ನಾಮಪತ್ರ, ಜೆ.ಟಿ. ಪ್ರಕಾಶ್ 1 ನಾಮಪತ್ರ, ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದ ಅಭ್ಯರ್ಥಿ ರಾಜಣ್ಣ ಎಚ್. 2 ನಾಮಪತ್ರ ಹಾಗೂ ನವ ಭಾರತ ಸೇನೆ ಪಕ್ಷದ ಅಭ್ಯರ್ಥಿ ಎನ್. ವಸಂತ ರಾವ್ ಜಗತಾಪ್ 1 ನಾಮಪತ್ರ ತಿರಸ್ಕೃತವಾಗಿದೆ ಎಂದು ಚುನಾವಣಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.