ADVERTISEMENT

ಚನ್ನಪಟ್ಟಣ: ದಿನಸಿ ಕಿಟ್‌ಗೆ ಮುಗಿಬಿದ್ದರು

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 5:43 IST
Last Updated 12 ಜುಲೈ 2021, 5:43 IST
ಚನ್ನಪಟ್ಟಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ನೀಡಿದ ದಿನಸಿ ಕಿಟ್ ಪಡೆಯಲು ಮುಗಿಬಿದ್ದಿದ್ದ ಕಟ್ಟಡ ಕಾರ್ಮಿಕರು
ಚನ್ನಪಟ್ಟಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ನೀಡಿದ ದಿನಸಿ ಕಿಟ್ ಪಡೆಯಲು ಮುಗಿಬಿದ್ದಿದ್ದ ಕಟ್ಟಡ ಕಾರ್ಮಿಕರು   

ಚನ್ನಪಟ್ಟಣ: ಪಟ್ಟಣದ ಕಾರ್ಮಿಕ ಇಲಾಖೆ ಕಚೇರಿ ಕಟ್ಟಡದಲ್ಲಿ ಶನಿವಾರ ನೀಡಿದ ದಿನಸಿ ಕಿಟ್ ಗಳಿಗೆ ಕಾರ್ಮಿಕರು ಕೊರೊನಾ ಲೆಕ್ಕಿಸದೆ ಮುಗಿಬಿದ್ದರು.

ತಾಲ್ಲೂಕಿನಾದ್ಯಂತ ಇರುವ ಸಂಘಟಿತ ಮತ್ತು ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ವತಿಯಿಂದ ದಿನಸಿ ಕಿಟ್ ನೀಡಲಾಗುತ್ತಿದೆ.

ಇಲಾಖೆ ವತಿಯಿಂದ ಸುಮಾರು 15 ಸಾವಿರ ಮಂದಿ ಕಾರ್ಮಿಕರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಗುತ್ತಿದ್ದು, ತಾಲ್ಲೂಕಿನಲ್ಲಿ 8 ಸಾವಿರ ಮಂದಿ ನೋಂದಾಯಿತ ಕಾರ್ಮಿಕರು ಇದ್ದು, ಉಳಿದವರು ಅಸಘಂಟಿತರಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ.

ADVERTISEMENT

ಇಲಾಖೆ ಶನಿವಾರ ಮಹೇಶ್ವರ ಕಲ್ಯಾಣ ಮಂಟಪದಲ್ಲಿ ಕಿಟ್ ನೀಡುತ್ತಿದ್ದು, ಕಾರ್ಮಿಕರು ಯಾವುದೇ ರೀತಿಯ ಕೊರೊನಾ ಮುನ್ನೆಚ್ಚರಿಕೆ ವಹಿಸದೆ ನಾಮುಂದು ತಾಮುಂದು ಎಂದು ಕಿಟ್ ಪಡೆದುಕೊಳ್ಳಲು ಮುಗಿಬಿದ್ದಿದ್ದರು. ಬೆರಣಿಕೆಯಷ್ಟಿದ್ದ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಇದನ್ನು ಕಂಡೂ ಕಾಣದಂತೆ ಮೌನ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.