ADVERTISEMENT

ಪೊಲೀಸರಿಗೆ ನೂತನ ವಾಹನ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 12:54 IST
Last Updated 1 ಡಿಸೆಂಬರ್ 2019, 12:54 IST
ರಸ್ತೆಯಲ್ಲಿ ಕಂಡು ಬಂದ ಪೊಲೀಸರ ನೂತನ ವಾಹನ
ರಸ್ತೆಯಲ್ಲಿ ಕಂಡು ಬಂದ ಪೊಲೀಸರ ನೂತನ ವಾಹನ   

ರಾಮನಗರ: ಹಳೆಯ ವಾಹನಗಳ ಬದಲಿಗೆ ಪೊಲೀಸ್ ಇಲಾಖೆಗೆ ಈಗ ನೂತನ ವಾಹನಗಳು ಲಭ್ಯವಾಗಿವೆ.

ಜಿಲ್ಲಾ ಪೊಲೀಸರ ಅಸಹಾಯಕ ಸ್ಥಿತಿಯನ್ನು ಮನಗಂಡ ಸರ್ಕಾರ ಸಿಬ್ಬಂದಿಗೆ ನೂತನ ಸ್ಕಾರ್ಪಿಯೊ ಸೇರಿದಂತೆ ವಿವಿಧ ಕಂಪನಿಗಳ ವಾಹನಗಳನ್ನು ನೀಡಿದೆ. ಜಿಲ್ಲಾ ಕೇಂದ್ರಕ್ಕೆ ಎರಡು ಹಾಗೂ ಪ್ರತಿ ತಾಲ್ಲೂಕು ಕೇಂದ್ರಕ್ಕೆ ಒಂದರಂತೆ ವಾಹನಗಳನ್ನು ನೀಡಲಾಗಿದೆ.

ಕಳೆದ ವಾರದಲ್ಲಿ ಸ್ಕಾರ್ಪಿಯೋ ಕಾರ್‌ಗಳು ಬಂದಿವೆ. ಈವರೆಗೆ ಹಳೆಯ ಟಾಟಾಸುಮೊ ದಲ್ಲಿ ಓಡಾಡುತ್ತಿದ್ದ ಪೊಲೀಸರು ನೂತನ ವಾಹನದಲ್ಲಿ ರಾತ್ರಿಯ ಪಾಳಿ ಸೇರಿದಂತೆ ಇತರೆ ಕೆಲಸಗಳಿಗೆ ಕಾರುಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಮಗರ ಮತ್ತು ಚನ್ನಪಟ್ಟಣ ತಾಲ್ಲೂಕಿಗೆ ನೂತನ ಕಾರು ಲಭ್ಯವಾದರೆ, ಮಾಗಡಿ ತಾಲ್ಲೂಕಿಗೆ ಹಳೆಯ ಕಾರು ಲಭಿಸಿದೆ. ಇನ್ನು ಮೂರು ಕಾರುಗಳು ಜಿಲ್ಲೆಗೆ ಬರಲಿವೆ.

ADVERTISEMENT

ಕೇಂದ್ರ ಸರ್ಕಾರದ ಯೋಜನೆಯಡಿ ಜಿಲ್ಲೆಗೆ ಬಂದ ಕಾರುಗಳು ತುರ್ತು ಸ್ಪಂದನ ಸಹಾಯಕ್ಕೆ ಲಭ್ಯವಾಗಲಿವೆ. 112 ಸಂಖ್ಯೆಯನ್ನು ಜಸ್ಟ್ ಡಯಲ್ ಮಾಡಿದರೆ, ಸಾಕು ಪೊಲೀಸರು ತಕ್ಷಣವೇ ಸ್ಪಂದಿಸಲಿದ್ದಾರೆ. ಪೊಲೀಸ್, ಅಗ್ನಿಶಾಮಕ, ಆಂಬುಲೆನ್ಸ್ ಇದರಲ್ಲಿ ಲಭ್ಯವಾಗಲಿದೆ. ನೂತನ ಕಾರುಗಳಾಗಿರುವ ಕಾರಣ, ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದನೆ ಸಿಗಲಿದೆ ಎಂಬು ಮಾತು ಜನರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.