ಕನಕಪುರ: ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ಕೋಟೆಕೊಪ್ಪ ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆಯಾಗಿ ಸುಂದರಮ್ಮ ರಾಜು ಮತ್ತು ಉಪಾಧ್ಯಕ್ಷೆಯಾಗಿ ಬಸವರಾಜಮ್ಮ ಶಿವಲಿಂಗೇಗೌಡ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಸಹಕಾರ ಇಲಾಖೆಯ ಪುರುಷೋತ್ತಮ್ ಮಂಗಳವಾರ ಚುನಾವಣೆ ನಡೆಸಿದರು. ಈ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಡೇರಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗೀತಾ ಮೋಹನ್‌ಕುಮಾರ್ ಚುನಾವಣಾ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ನಿರ್ದೇಶಕರಾದ ಪುಷ್ಪಾ ಮಾರೇಗೌಡ, ಪ್ರೇಮಾ ಮುದ್ದೇಗೌಡ, ರತ್ನಮ್ಮ ಪುಟ್ಟಸ್ವಾಮಿಗೌಡ, ರೇಖಾ ಕೆಂಪಮಾದೇಗೌಡ, ಶಿವಮ್ಮ ಕರಿಯಪ್ಪ, ಸುಧಾ ನಾಗರಾಜು, ಸುನೀತಾ ಲೋಕೇಶ್, ನಾಗಮ್ಮ ಮುನಿರಾಜು ಬೋವಿ, ಮಮತಾ ವೆಂಕಟೇಶ್, ಅನಿತಾಕುಮಾರಿ ಶಿವರುದ್ರ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮ ಪಂಚಾಯಿತಿ ಸದಸ್ಯರಾದ ದೀಪು, ಚಿಕ್ಕಮುನಿಯ ಬೋವಿ, ಕೆ.ಸಿ. ಕಾಂತರಾಜು, ಮುಖಂಡರಾದ ಕಾಳಮಾರೇಗೌಡ, ಕರಿಯಪ್ಪ, ಶಿವಲಿಂಗೇಗೌಡ, ಕೆ.ಸಿ. ನಾಗರಾಜು, ಪುಟ್ಟಸ್ವಾಮಿಗೌಡ, ಸ್ವಾಮಿ ನಿಂಗೇಗೌಡ, ಮೋಹನ್‌ಕುಮಾರ್, ಸ್ವಾಮಿಗೌಡ, ಸುರೇಶ್ ಕೆ.ಪಿ. ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯನ್ನು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.