ಹಾರೋಹಳ್ಳಿ: ದೇವರಕಗ್ಗಲಹಳ್ಳಿಯಲ್ಲಿ ನಾಗರಿಕರ ಸೌಕರ್ಯಕ್ಕಾಗಿ ಮೀಸಲಾಗಿ ಇಟ್ಟಿದ್ದ ನಿವೇಶನಗಳನ್ನು (ಸಿ.ಎ ಸೈಟ್) ಗುರುವಾರ ಭಾರಿ ಪ್ರತಿರೋಧದ ಮಧ್ಯೆ ತೆರವುಗೊಳಿಸಲಾಯಿತು.
ನಿವೇಶನಗಳನ್ನು ಎರಡು ಕುಟುಂಬಗಳು ಅಕ್ರಮವಾಗಿ ಸ್ವಾಧಿನ ಪಡಿಸಿಕೊಂಡಿದ್ದವು. ತೆರವು ಕಾರ್ಯಾಚರಣೆ ವೇಳೆ ಎರಡೂ ಕುಟುಂಬದವರು ತೀವ್ರ ಪ್ರತಿರೋಧ ಒಡ್ಡಿದ ಕಾರಣ ಹೈಡ್ರಾಮಾ ನಡೆಯಿತು.
ಪೊಲೀಸರು ಹಾಗೂ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸದಂತೆ ಕುಟುಂಬ ಸದಸ್ಯರ ಮನವೊಲಿಸಲು ಮುಂದಾದಾಗ ಮಾತಿನ ಚಕಮಕಿ ನಡೆಯಿತು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಾಲಾವಕಾಶ ನೀಡಿ ಮರಳಿದರು.
ಚೀಲೂರು ಗ್ರಾ.ಪಂ ಅಧ್ಯಕ್ಷೆ ಸುಧಾ ನಾಗೇಶ್, ಪಿಡಿಒ ಮಹದೇವ್, ಸದಸ್ಯರಾದ ರವಿ ಕುಮಾರ್,ಕೃಷ್ಣಮೂರ್ತಿ ಹಾಜರಿದ್ದರು.
ಸಾರ್ವಜನಿಕರ ಸೌಲಭ್ಯಕ್ಕಾಗಿ ಮೀಸಲಿಟ್ಟಿದ್ದ ನಿವೇಶನ ಒತ್ತುವರಿ ಸಂಬಂಧ ಈಗಾಗಲೇ ಒತ್ತುವರಿದಾರರಿಗೆ ಎರಡು ಬಾರಿ ನೊಟೀಸ್ ನೀಡಲಾಗಿತ್ತು. ತೆರವಿಗೆ ಬಂದಾಗ ಹೈಡ್ರಾಮ ನಡೆಸಿದ್ದಾರೆ. ಒಂದಷ್ಟು ದಿನ ಕಾಲಾವಕಾಶ ಕೇಳಿದ್ದಾರೆ. ಯಾರಿಗೂ ತೊಂದರೆಯಾಗದಂತೆ ಒತ್ತುವರಿ ತೆರವುಗೊಳಿಸಲಾಗುವುದು-ಮಹದೇವ್ ಪಿಡಿಒ ಚೀಲೂರು ಗ್ರಾ.ಪಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.