ADVERTISEMENT

ಕನಕಪುರ: ಮೇಕೆದಾಟು ಜಲಾಶಯ ನಿರ್ಮಾಣ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 2:39 IST
Last Updated 29 ಮಾರ್ಚ್ 2021, 2:39 IST
ಕನಕಪುರ ಚನ್ನಬಸಪ್ಪ ವೃತ್ತದಲ್ಲಿ ರೈತ ಸಂಘಟನೆ ಮತ್ತು ಕನ್ನಡಪರ ಸಂಘಟನೆಗಳು ತಮಿಳುನಾಡು ರೈತರ ಪ್ರತಿಭಟನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು
ಕನಕಪುರ ಚನ್ನಬಸಪ್ಪ ವೃತ್ತದಲ್ಲಿ ರೈತ ಸಂಘಟನೆ ಮತ್ತು ಕನ್ನಡಪರ ಸಂಘಟನೆಗಳು ತಮಿಳುನಾಡು ರೈತರ ಪ್ರತಿಭಟನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು   

ಕನಕಪುರ: ಮೇಕೆದಾಟು ಜಲಾಶಯ ನಿರ್ಮಾಣ ವಿರೋಧಿಸಿ ತಮಿಳುನಾಡು ರೈತ ಸಂಘಟನೆಗಳು ಪ್ರತಿಭಟನೆ ನಡೆಸಲು ಸಂಚು ರೂಪಿಸಿದ್ದನ್ನು ಖಂಡಿಸಿ ರೈತ ಸಂಘಟನೆ ಮತ್ತು ಕನ್ನಡಪರ ಸಂಘಟನೆಗಳು ಭಾನುವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಇಲ್ಲಿನ ಚನ್ನಬಸಪ್ಪ ವೃತ್ತದಲ್ಲಿ ಪ್ರತಿಭಟನಾಕಾರರು ಜಮಾವಣೆಗೊಂಡು ಮಾತನಾಡಿ, ‘ಕರ್ನಾಟಕ ಮತ್ತು ಕಾವೇರಿ ನೀರಿಗೆ ಸಂಬಂಧಿಸಿದಂತೆ ನಿರಂತರವಾಗಿ ಕಿರುಕುಳ ನೀಡುತ್ತಾ ತೊಂದರೆ ಕೊಡುತ್ತಾ ಬಂದಿದೆ. ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಶಾಶ್ವತ ಪರಿಹಾರ ನೀಡಬೇಕಿದೆ’ ಎಂದು ಒತ್ತಾಯಿಸಿದರು.

‘ನ್ಯಾಯಯುತವಾಗಿ ನಮ್ಮ ರಾಜ್ಯದಲ್ಲಿ ನಮ್ಮ ಪಾಲಿನ ನೀರನ್ನು ನಾವು ಬಳಸಿಕೊಳ್ಳಲು ಬಿಡದೆ ಸದಾ ತಮಿಳುನಾಡು ಅಡ್ಡಗಾಲು ಆಗುತ್ತಿದೆ. ಸರ್ಕಾರವು ಇದಾವುದನ್ನು ಲೆಕ್ಕಿಸದೆ ಕೈಗೆತ್ತಿಗೊಂಡಿರುವ ಮೇಕೆದಾಟು ಜಲಾಶಯ ನಿರ್ಮಾಣವನ್ನು ಶೀಘ್ರವಾಗಿ ಪ್ರಾರಂಭಿಸಿ ಪೂರ್ಣಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕಾವೇರಿ ವಿಚಾರವಾಗಿ ಸದಾ ತಗಾದೆ ತೆಗೆಯುತ್ತಿರುವ ತಮಿಳುನಾಡಿಗೆ ಮುಂದೆಂದು ಕಾವೇರಿ ವಿಚಾರವಾಗಿ ಬರದಂತೆ ಮಾಡಬೇಕು. ಕಾವೇರಿ ನೀರು ನಮ್ಮದು, ಅದಕ್ಕಾಗಿ ಎಂಥ ಹೋರಾಟ ಎದುರಾದರು ಅದಕ್ಕೆ ನಾವು ಸಿದ್ಧರಿದ್ದೇವೆ’ ಎಂದು ಎಚ್ಚರಿಸಿದರು.

ಹೋರಾಟಗಾರರಾದ ಕೆ.ಬಿ.ನಾಗರಾಜು, ಸಂಪತ್‌ಕುಮಾರ್‌, ಮಲ್ಲಿಕಾರ್ಜುನ್‌, ನೀಲಿರಮೇಶ್‌, ದೇವರಾಜು, ಕೂ.ಗಿ.ಗಿರಿಯಪ್ಪ, ಕೆ.ಎಸ್‌. ಭಾಸ್ಕರ್‌, ಅಸ್ಗರ್‌ಖಾನ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.