ADVERTISEMENT

ದೊಡ್ಡ ಆಲಹಳ್ಳಿ, ಹಾರೋಹಳ್ಳಿಯಲ್ಲಿ ಪಬ್ಲಿಕ್‌ ಶಾಲೆ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 21 ಮೇ 2019, 14:07 IST
Last Updated 21 ಮೇ 2019, 14:07 IST
ಪಬ್ಲಿಕ್‌ ಶಾಲೆ ದಾಖಲಾತಿ ಪ್ರಚಾರ ವಾಹನ
ಪಬ್ಲಿಕ್‌ ಶಾಲೆ ದಾಖಲಾತಿ ಪ್ರಚಾರ ವಾಹನ   

ಕನಕಪುರ: ಸರ್ಕಾರ ರಾಜ್ಯದಲ್ಲಿ ಹೊಸದಾಗಿ ಪ್ರಾರಂಭ ಮಾಡುತ್ತಿರುವ 276 ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ತಾಲ್ಲೂಕಿಗೆ 2 ಶಾಲೆಗಳು ಮಂಜೂರು ಆಗಿವೆ.

ತಾಲ್ಲೂಕಿನ ದೊಡ್ಡಆಲಹಳ್ಳಿ ಮತ್ತು ಹಾರೋಹಳ್ಳಿಯಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ ಪ್ರಾರಂಭಗೊಳ್ಳಲಿದ್ದು ಮೊದಲಿಗೆ ಎಲ್‌ಕೆಜಿಗೆ ಪ್ರವೇಶ ದಾಖಲಾತಿ ನಡೆಯಲಿದೆ.

ಸರ್ಕಾರದಿಂದ ಎಲ್ಲವೂ ಉಚಿತವಾಗಿ ಇಂಗ್ಲಿಷ್‌ ಮಾಧ್ಯಮದಲ್ಲಿ ಸಿಗಲಿರುವ ಈ ಶಿಕ್ಷಣಕ್ಕೆ ಪೋಷಕರು ತಮ್ಮ ಮಕ್ಕಳನ್ನು ದಾಖಲಿಸುವಂತೆ ಪ್ರಚಾರ ಆಂದೋಲನ ಕೈಗೊಳ್ಳಲಾಯಿತು.

ADVERTISEMENT

‌ಬೇಸಿಗೆ ರಜೆ ಮೇ28 ರಂದು ಮುಗಿದು ಶಾಲೆಗಳು ಪ್ರಾರಂಭವಾಗಲಿವೆ. ಎಲ್‌ಕೆಜಿಗೆ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.

ನೂತನವಾಗಿ ಪ್ರಾರಂಭಿಸುತ್ತಿರುವ ಪಬ್ಲಿಕ್‌ ಶಾಲೆಗೆ ಅವಶ್ಯವಿರುವ ಸಿಬ್ಬಂದಿಯನ್ನು ಅರ್ಹತೆ ಆಧಾರದ ಮೇಲೆ ಶಾಲಾ ಸಮಿತಿ ಅತಿಥಿ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳಲಿದೆ. ಮೇ25ರಂದು ಶಾಲಾ ವ್ಯಾಪ್ತಿಯ ಗ್ರಾಮದಲ್ಲಿ ಸಾರ್ವಜನಿಕವಾಗಿ ದಾಖಲಾತಿ ವಿಶೇಷ ಅಂದೋಲನ ನಡೆಸಿ ಜಾಗೃತಿ ಮೂಡಿಸಲಾಗುವುದು ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.