ADVERTISEMENT

ಕನಕಪುರ: ರಸ್ತೆಯಲ್ಲಿದ್ದ ಹೆಬ್ಬಾವು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 2:21 IST
Last Updated 9 ಡಿಸೆಂಬರ್ 2025, 2:21 IST
ಕನಕಪುರ ರಾಮನಗರ ರಸ್ತೆಯ ಹೊಸಕೋಟೆಯಲ್ಲಿ ವಾಹನಗಳಿಗೆ ಅಡ್ಡಲಾಗಿ ರಸ್ತೆ ದಾಟುತ್ತಿದ್ದ ಭಾರಿ ಗಾತ್ರದ ಹೆಬ್ಬಾವನ್ನು ಹಿತೈಷಿ ಮತ್ತು ನಿತಿನ್ ರಕ್ಷಣೆ ಮಾಡಿಸಿರುವುದು
ಕನಕಪುರ ರಾಮನಗರ ರಸ್ತೆಯ ಹೊಸಕೋಟೆಯಲ್ಲಿ ವಾಹನಗಳಿಗೆ ಅಡ್ಡಲಾಗಿ ರಸ್ತೆ ದಾಟುತ್ತಿದ್ದ ಭಾರಿ ಗಾತ್ರದ ಹೆಬ್ಬಾವನ್ನು ಹಿತೈಷಿ ಮತ್ತು ನಿತಿನ್ ರಕ್ಷಣೆ ಮಾಡಿಸಿರುವುದು   

ಕನಕಪುರ: ಹೊಸಕೋಟೆ ಬಳಿ ಭಾನುವಾರ ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದ ಬಾರಿ ಗಾತ್ರದ ಹೆಬ್ಬಾವನ್ನು ಯುವಕರಿಬ್ಬರು ರಕ್ಷಣೆ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಕನಕಪುರ ನಗರದ ಹಿತೈಷಿ ಯು.ಕೆ ಮತ್ತು ನಿತಿನ್ ವಾಹನದಲ್ಲಿ ಬರುತ್ತಿದ್ದಾಗ ಹೊಸಕೋಟೆ ಬಳಿ ಬಾರಿ ಗಾತ್ರದ ಹೆಬ್ಬಾವು ವಾಹನಗಳಿಗೆ ಅಡ್ಡಲಾಗಿ ರಸ್ತೆ ದಾಟುತ್ತಿತ್ತು.

ಇದನ್ನು ಗಮನಿಸಿದ ಯುವಕರು ತಕ್ಷಣ ವಾಹನಗಳನ್ನು ತಡೆದು ಹೆಬ್ಬಾವನ್ನು ದೊಡ್ಡ ಚೀಲದಲ್ಲಿ ಹಾಕಿ ಅರಣ್ಯ ಇಲಾಖೆಯ ಕಚೇರಿಗೆ ತೆಗೆದುಕೊಂಡು ಹೋಗಿದ್ದಾರೆ.  

ಹೆಬ್ಬಾವು ಆರೋಗ್ಯವಾಗಿರುವುದನ್ನು ಖಚಿತಪಡಿಸಿಕೊಂಡ ಅರಣ್ಯ ಅಧಿಕಾರಿಗಳು ಅದನ್ನು ಸಂರಕ್ಷಿತ ಅರಣ್ಯ ಪ್ರದೇಶದೊಳಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.