ಚನ್ನಪಟ್ಟಣ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮೇ 26 ರಂದು ರೈತರಿಗೆ ಉಚಿತವಾಗಿ ಆರೋಗ್ಯ ಹಾಗೂ ಮಂಡಿಕೀಲು ನೋವು ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಯೋಗೇಶ್ವರ್ ಚಾರಿಟಬಲ್ ಟ್ರಸ್ಟ್, ರೋಟರಿ ಸಂಸ್ಥೆ, ಬೆಂಗಳೂರಿನ ಕಾವೇರಿ ಹಾಸ್ಪಿಟಲ್, ಬಿಜಿಎಸ್ ಗ್ಲೋಬಲ್ ವೈದ್ಯಕೀಯ ಮಹಾ ವಿದ್ಯಾಲಯ ಸಹಯೋಗದಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ.
ಮಂಡಿ ನೋವು, ಕೀಲುನೋವುಗಳಿಂದ ಬಳಲುತ್ತಿರುವ ರೈತರಿಗೆ ಉಚಿತವಾಗಿ ಮಂಡಿಚಿಪ್ಪು ಬದಲಿ ರೋಬೋಟಿಕ್ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಜೊತೆಗೆ ಕಣ್ಣು ತಪಾಸಣೆ ಹಾಗೂ ಕನ್ನಡಕ ವಿತರಣೆ ನಡೆಯಲಿದೆ.
ಮಾಹಿತಿಗೆ ಕೆ.ಅರ್. ಗೋಪಾಲಕೃಷ್ಣ (8088252465), ನರಸಿಂಹ (9741032928), ಜಯಸ್ವಾಮಿ (9844533285), ರಮೇಶ್ (9880970115) ಅವರನ್ನು ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.