ಕುದೂರು:ದನ ಮೇಯಿಸುವ ಸಮಯದಲ್ಲಿ ಹಲ್ಲೆ ಮಾಡಿ ಸರಗಳ್ಳತನ ಮಾಡಿದ ಆರೋಪಿಯನ್ನು ಕುದೂರು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಫೆ.28ರಂದು ಮಂಗಮ್ಮ ಎಂಬುವರು ಮಾದಿಗೊಂಡನಹಳ್ಳಿ ಬಳಿ ಬೆಟ್ಟದ ತಪ್ಪಲಿನಲ್ಲಿ ದನ ಮೇಯಿಸುತ್ತಿದ್ದಾಗ ವ್ಯಕ್ತಿಯೊಬ್ಬ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನದ ತಾಳಿ, ಗುಂಡುಗಳಿರುವ ಕರಿಮಣಿ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ದೂರು ದಾಖಲಾಗಿತ್ತು.
ಹಲ್ಲೆ ನಡೆಸಿ, ಕಳವು ಮಾಡಿದ ಆರೋಪಿ ಮಂಜುನಾಥ ಮಾಳಕ್ಕ ಎಂದು ಗುರುತಿಸಲಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯು ಬೆಳಗಾವಿ ಜಿಲ್ಲೆ ಕಡಣ ಶಿವಪುರ ನಿವಾಸಿ ಎಂದು ತಿಳಿದು ಬಂದಿದೆ.
ಉಪಾಧೀಕ್ಷಕ ಪ್ರವೀಣ್ ನೇತೃತ್ವದಲ್ಲಿ ಕುದೂರು ಠಾಣೆ ಪಿ.ಐ ನವೀನ್ ಬಿ., ಜಗದೀಶ್ ನಾಯ್ಕ ಪಿಎಸ್ಐ ಹಾಗೂ ಸಿಬ್ಬಂದಿ ಎಚ್.ಸಿ ಸೂರ್ಯಕುಮಾರ್, ಎಚ್.ಸಿ ಗುರುಮೂರ್, ಲೋಹಿತ್ ನ್ಯಾಮನ್ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.