ADVERTISEMENT

ರಾಮನಗರ: ಪೈಪ್‌ನಲ್ಲಿ ಮನೆಗಳಿಗೆ ಅಡುಗೆ ಅನಿಲ

ಮಾಗಡಿ:ಕಾಮಗಾರಿಗೆ ಶಾಸಕ ಎ.ಮಂಜುನಾಥ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 14:36 IST
Last Updated 10 ಜೂನ್ 2020, 14:36 IST
ಮಾಗಡಿ ವಾರ್ಡ್‌ 5 ರಲ್ಲಿ ಪೈಪ್ ಮೂಲಕ ಗ್ಯಾಸ್‌ ಸರಬರಾಜು ಕಾಮಗಾರಿಗೆ ಶಾಸಕ ಎ.ಮಂಜುನಾಥ ಶಂಕುಸ್ಥಾಪನೆ ನೆರವೇರಿಸಿದರು
ಮಾಗಡಿ ವಾರ್ಡ್‌ 5 ರಲ್ಲಿ ಪೈಪ್ ಮೂಲಕ ಗ್ಯಾಸ್‌ ಸರಬರಾಜು ಕಾಮಗಾರಿಗೆ ಶಾಸಕ ಎ.ಮಂಜುನಾಥ ಶಂಕುಸ್ಥಾಪನೆ ನೆರವೇರಿಸಿದರು   

ಮಾಗಡಿ: ಪಟ್ಟಣದ ಮನೆಗಳಿಗೆ ಗ್ಯಾಸ್ ಪೈಪ್ ಅಳವಡಿಕೆಯ ಮೂಲಕ ಅಡುಗೆ ಅನಿಲಸರಬರಾಜು ಮಾಡಲಾಗುವುದು ಎಂದು ಶಾಸಕ ಎ. ಮಂಜುನಾಥ ತಿಳಿಸಿದರು.

ತಿರುಮಲೆಯ 5ನೇ ವಾರ್ಡ್‌ನಲ್ಲಿ ಗ್ಯಾಸ್ ಪೈಪ್ ಅಳವಡಿಕೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು,ನ್ಯಾಚುರಲ್‌ ಗ್ಯಾಸ್‌ ಟಿ.ಎಂ. ಗೇಲ್‌ ಮತ್ತು ಬಿಪಿಸಿಎಲ್‌ನ ಪಾಲುದಾರಿಕೆಯಲ್ಲಿ ಸೌಲಭ್ಯ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪಟ್ಟಣದ ಎಲ್ಲ 23 ವಾರ್ಡ್‌ ಮನೆಗಳೂ ಪೈಪ್‌ ಮೂಲಕ ಅಡುಗೆ ಅನಿಲ ಸರಬರಾಜು ಮಾಡಲಾಗುತ್ತಿದೆ. ಪೈಪ್ ಮೂಲಕ ಮನೆಗಳಿಗೆ ಗ್ಯಾಸ್ ಸರಬರಾಜು ಮಾಡುವುದರಿಂದ ಸಿಲಿಂಡರ್ ಸ್ಫೋಟ ಸೇರಿದಂತೆ ಯಾವುದೇ ಅವಘಡ ಸಂಭವಿಸುವುದಿಲ್ಲ. ಬುಕ್ ಮಾಡುವ ಅವಶ್ಯಕತೆ ಇರುವುದಿಲ್ಲ.ನಿರಂತರವಾಗಿ ಗ್ಯಾಸ್ ಸರಬರಾಜು ಇರುತ್ತದೆ ಎಂದು ತಿಳಿಸಿದರು.

ADVERTISEMENT

ಜನರು ಸದ್ಯ ಖರೀದಿ ಮಾಡುತ್ತಿರುವ ‌ದರಕಿಂತ ಕಡಿಮೆ ದರ ಇರಲಿದೆ. ಪೈಪ್ ಮೂಲಕ ಗ್ಯಾಸ್ ಸಂಪರ್ಕಕ್ಕೆ ಮನೆಗೆ ₹ 6,000 ಠೇವಣಿ ಕಟ್ಟಬೇಕು. ಇದಿಷ್ಟೂ ಹಣವನ್ನು ಒಂದೇ ಬಾರಿ ಕಟ್ಟಬೇಕಾಗಿಲ್ಲ. ಆರು ಸಾವಿರ ಹಣ ಮುಗಿದ ನಂತರ ಬಳಸಿದಷ್ಟು ಗ್ಯಾಸ್‌ ಹಣ ಪಾವತಿಸ ಬೇಕಾಗುತ್ತದೆ ಎಂದು ತಿಳಿಸಿದರು.

ಜೆಡಿಎಸ್‌ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ, ಪುರಸಭಾ ಸದಸ್ಯರಾದ ಕಾಂತರಾಜು, ಕೆ.ವಿ. ಬಾಲರಘು, ನ್ಯಾಚುರಲ್ ಗ್ಯಾಸ್ ಏಜೆನ್ಸಿಯ ಅಧಿಕಾರಿಗಳಾದ ಅಜಯ್ ನಾಯರ್, ವಿಷ್ಣು ದಾಸ್, ಜಿ. ಮಂಜುನಾಥ್, ಜೆಡಿಎಸ್ ಮುಖಂಡರಾದ ಜುಟ್ಟನಹಳ್ಳಿ ಜಯರಾಮ್‌, ಎನ್ಇಎಸ್‌ ಜಯರಾಮ್‌ ಕುಂಚಿಟಿಗ, ಭೈರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.