ADVERTISEMENT

ಮಾಂಸ ಮಾರಾಟಕ್ಕೆ ಅವಕಾಶ: ಪೊಲೀಸರ ಕಾವಲು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 6:41 IST
Last Updated 26 ಮಾರ್ಚ್ 2020, 6:41 IST

ರಾಮನಗರ: ಯುಗಾದಿ ವರ್ಷದ ತೊಡಕಿನ ಅಂಗವಾಗಿ ಜಿಲ್ಲೆಯಾದ್ಯಂತ ಮಾಂಸ ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

ಮಾಂಸದ ಅಂಗಡಿಗಳ ಮುಂಭಾಗ ಪೊಲೀಸರು ಗೆರೆಗಳನ್ನು ಹಾಕಿದ್ದಾರೆ. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಂಸ ಖರೀದಿ ಮಾಡುತ್ತಿದ್ದಾರೆ. ಪೊಲೀಸರ ಕಣ್ಗಾವಲು ಇದೆ.

ಬಂದ್ ಹಿನ್ನೆಲೆಯಲ್ಲಿ ‌ಮಾಂಸದ ಬೆಲೆಯೂ ಏರಿಕೆ ಆಗಿದೆ. ಪ್ರತಿ ಕೆ.ಜಿ.ಗೆ 700-800 ರವೆರೆಗೂ ಮಾರಾಟ ನಡೆದಿದೆ. ಗ್ರಾಮೀಣ ಪ್ರದೇಶದಲ್ಲಿ ಬುಧವಾರ ರಾತ್ರಿಯೇ ಗುಡ್ಡೆಬಾಡು ಮಾರಾಟ ನಡೆದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.