ADVERTISEMENT

ನಾನು ಓದಿದ ಪುಸ್ತಕ: ಮಾನವತಾವಾದಿ ಅರಸು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 3:20 IST
Last Updated 1 ನವೆಂಬರ್ 2020, 3:20 IST
ಬಸವರಾಜ
ಬಸವರಾಜ   

ಅಖಂಡ ಕನ್ನಡ ನಾಡಿಗೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದ, ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ದೇವರಾಜ ಅರಸು ಅವರ ಬಗ್ಗೆ ಬರೆದ ‘ಒಡನಾಡಿ ಅರಸು’ ಎಂಬ ಕನ್ನಡ ಪುಸ್ತಕವನ್ನು ಇತ್ತೀಚೆಗೆ ಓದಿದೆ.

ಒಂದು ನಾಡನ್ನು ಹೇಗೆ ಕಟ್ಟಬೇಕೆನ್ನುವುದಕ್ಕೆ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಕೆಲಸ ಮಾಡಿದ ಅರಸು ಅವರದು ದೇಶಕ್ಕೆ ಮಾದರಿಯಾಗಿ ನಿಲ್ಲುವಂತಹ ವ್ಯಕ್ತಿತ್ವ. ಈ ಪುಸ್ತಕ ಓದಿದ ಮೇಲೆ ಅವರ ವ್ಯಕ್ತಿತ್ವದ ಅರಿವು ನನಗಾಯಿತು.

ಮೀಸಲಾತಿ ಮೂಲಕ ಅವಕಾಶ ವಂಚಿತ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಿದರು. ಭೂ ಸುಧಾರಣೆ ಮೂಲಕ ಸಂಪತ್ತಿನ ಸಮಾನ ಹಂಚಿಕೆಗೆ ಕಾರಣರಾದ ಅರಸು, ಈ ಶತಮಾನದ ಸ್ಮರಣೀಯ ವ್ಯಕ್ತಿ ಎಂದೇ ಹೇಳಬಹುದು. ಅರಸು ಬದುಕಿನ ಬಗೆಗಿನ ಹತ್ತು ಹಲವು ಆಸಕ್ತಿಕರ ಸಂಗತಿಗಳು ಇದರಲ್ಲಿವೆ.

ADVERTISEMENT

ಬಸವರಾಜ ನರಗಟ್ಟಿ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.