ADVERTISEMENT

ಓದಿದ ಪುಸ್ತಕ: ಕಾಡುವ ಪಾತ್ರಧಾರಿಗಳು...

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 2:48 IST
Last Updated 1 ನವೆಂಬರ್ 2020, 2:48 IST
ಎಂ.ಉದಯ್‌, ಮಂಕುಂದ ಚನ್ನಪಟ್ಟಣ.
ಎಂ.ಉದಯ್‌, ಮಂಕುಂದ ಚನ್ನಪಟ್ಟಣ.   

ಇತ್ತೀಚೆಗೆ ನನ್ನ ಮನವನ್ನು ಕಾಡಿದ, ಅರೆಕ್ಷಣ ಕನವರಿಸುವಂತೆ ಮಾಡಿದ ಕೃತಿ ಎಸ್‌.ಎಲ್‌. ಭೈರಪ್ಪ ಅವರ ‘ವಂಶವೃಕ್ಷ’. ಭಾವಗಳ ನಡುವೆ ಬಯಕೆಗಳು ಬೆರೆಯುವಂತೆ, ಬೆಯ್ಯುವಂತೆ ಅವರು ವ್ಯಕ್ತಗೊಳಿಸಿದ್ದಾರೆ. ಈ ಕೃತಿಯಲ್ಲಿನ ಅಷ್ಟು ಪಾತ್ರಧಾರಿಗಳು ನನ್ನ ಮನದೊಳಗೆ ಮನೆ ಮಾಡಿದ್ದಾರೆ. ಮಹತ್ತರವಾದ ಆದರ್ಶವಾದಿ ಶ್ರೀನಿವಾಸ ದ್ತೋತ್ರಿ ಅವರ ಘನತೆ, ಗಾಢತೆಯು ನನ್ನೊಳಗಿನ ತುಮುಲಗಳನ್ನು ತೊಡೆದು ಹಾಕುವಂತಹ ಶಕ್ತಿಯಾಗಿದ್ದಾರೆ. ಅಂತೆಯೇ ಸದಾಶಿವ ರಾವ್‌ ಅವರ ಬದ್ಧತೆ, ರಾಜಾರಾವ್ ಅವ‌ರ ಚಾಕಚಕ್ಯತೆ, ನಂಜುಂಡ ದ್ತೋತ್ರಿಯ ಪ್ರೌಢತೆ, ಪೃಥ್ವಿ ಹಾಗೂ ನಾಗುವಿನ ವ್ಯಾಕುಲತೆ, ಕಾತ್ಯಾಯಿನಿಯ ಚಂಚಲತೆಯು ಒಂದಲ್ಲ ಒಂದು ರೀತಿಯಲ್ಲಿ ಮಾರ್ಗದರ್ಶನ ನೀಡುವಂತಿದೆ. ಕೃತಿಯಲ್ಲಿನ ಬರವಣಿಗೆ ಮತ್ತು ಭಾಷೆ ಬಳಕೆಯ ಶಕ್ತಿ ಅಪರಿಮಿತವಾದದ್ದು.

-ಎಂ. ಉದಯ್‌, ಮಂಕುಂದ ಚನ್ನಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.