ADVERTISEMENT

ಸಂತ್ರಸ್ತರಿಗೆ ₹3.67 ಕೋಟಿ ಪರಿಹಾರ

ಕಸಬಾ, ಕೈಲಾಂಚ ಹೋಬಳಿಯ ಕುಟುಂಬಗಳಿಗೆ ನೆರವಿನ ಚೆಕ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 4:30 IST
Last Updated 1 ಅಕ್ಟೋಬರ್ 2022, 4:30 IST
ಅತಿವೃಷ್ಟಿಯಿಂದ ತೊಂದರೆಗೀಡಾದ ಕುಟುಂಬಗಳಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ನೆರವಿನ ಚೆಕ್ ವಿತರಿಸಿದರು. ತಹಶೀಲ್ದಾರ್ ವಿಜಯಕುಮಾರ್ ಜೊತೆಗಿದ್ದರು
ಅತಿವೃಷ್ಟಿಯಿಂದ ತೊಂದರೆಗೀಡಾದ ಕುಟುಂಬಗಳಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ನೆರವಿನ ಚೆಕ್ ವಿತರಿಸಿದರು. ತಹಶೀಲ್ದಾರ್ ವಿಜಯಕುಮಾರ್ ಜೊತೆಗಿದ್ದರು   

ರಾಮನಗರ: ಅತಿವೃಷ್ಟಿ ಸಂತ್ರಸ್ತ ಕುಟುಂಬಗಳಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಶುಕ್ರವಾರ ತಹಶೀಲ್ದಾರ್ ಕಚೇರಿಯನ್ನು ಪರಿಹಾರದ ಚೆಕ್‍ಗಳನ್ನು ವಿತರಿಸಿದರು.

ಈ ಸಂದರ್ಭ ಮಾತನಾಡಿದ ಅನಿತಾ, ಇಂದು ಕಸಬಾ ಮತ್ತು ಕೈಲಾಂಚ ಹೋಬಳಿಯ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ. ಮನೆಗೆ ಹಾನಿ ಆಗಿರುವ 2169 ಕುಟುಂಬಗಳಿಗೆ ತಲಾ ₹10 ಸಾವಿರ, 117 ಕುಟುಂಬಗಳಿಗೆ ₹50 ಸಾವಿರ ಹಾಗೂ 18 ಕುಟುಂಬಗಳಿಗೆ ₹95 ಸಾವಿರ ಪರಿಹಾರವಾಗಿ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮಂಚನಬೆಲೆ ಜಲಾಶಯದಿಂದ ಅರ್ಕಾವತಿಗೆ ಹೆಚ್ಚು ನೀರು ಹರಿದ ಪರಿಣಾಮ ಸುಗ್ಗನಹಳ್ಳಿ, ಹರೀಸಂದ್ರ ಬಳಿ ನಿರ್ಮಿಸಿದ್ದ ಸೇತುವೆಗಳು ಕುಸಿದಿವೆ. ಶೀಘ್ರವಾಗಿ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಸದನದಲ್ಲಿ ಸರ್ಕಾರದ ಗಮನ ಸೆಳೆಯಲಾಗಿದೆ. ಜೊತೆಗೆ ನಗರ ಪ್ರದೇಶದ ಹಾನಿಯಾದ ಸ್ಥಳಗಳಿಗೆ ಮುಖ್ಯಮಂತ್ರಿ ಅವರೇ ಖುದ್ದಾಗಿ ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೂ ಶೀಘ್ರವಾಗಿ ವಿಶೇಷ ಅನುದಾನ ಘೋಷಣೆ ಮಾಡಿಲ್ಲ. ಹದಗೆಟ್ಟ ರಸ್ತೆ ಅಭಿವೃದ್ದಿ ಕಾರ್ಯಗಳು, ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತೇನೆ ಎಂದರು.

ADVERTISEMENT

ಶಾಸಕರ ಅನುದಾನದಲ್ಲಿ ಮೂರು ತಂಗುದಾಣಗಳನ್ನು ನಿರ್ಮಿಸಿದ್ದು, ಇದರಲ್ಲಿ ಪೊಲೀಸ್ ವಸತಿಗೃಹದ ಬಳಿಯ ತಂಗುದಾಣ ಲೋಕಾರ್ಪಣೆ ಮಾಡಲಾಗಿದೆ. ಇನ್ನೆರಡನ್ನು ಶೀಘ್ರವಾಗಿ ಉದ್ಘಾಟಿಸಲಾಗುವುದು ಎಂದರು.

ಯಾರಿಗೆ ಎಷ್ಟು ಪರಿಹಾರ?

ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮಳೆಹಾನಿ ಪ್ರದೇಶದ ಅರ್ಹ ಸಂತ್ರಸ್ಥರಿಗೆ ಶಾಸಕರ ಸಮ್ಮುಖದಲ್ಲಿ ₹3,67,55,780 ಪರಿಹಾರ ಧನವಾಗಿ ವಿತರಿಸಲಾಗುತ್ತಿದೆ. ಇದುವರೆಗೆ ಎ ಕ್ಯಾಟಗರಿಯ 37 ಕುಟುಂಬಗಳಿಗೆ ₹35,18,700, ಬಿ ಕ್ಯಾಟಗರಿಯಡಿ 18 ಮಂದಿಗೆ ₹17,11,800 ಹಾಗೂ ಸಿ ಕ್ಯಾಟಗರಿಯಡಿ 117 ಜನರಿಗೆ ₹58,50,000 ನೀಡಲಾಗಿದ ಎಂದು ತಹಶೀಲ್ದಾರ್ ಎಂ. ವಿಜಯಕುಮಾರ್ ತಿಳಿಸಿದರು.

ಮನೆಗೆ ನೀರು ನುಗ್ಗಿ ಹಾನಿಯಾದ 2169 ಪಲಾನುಭವಿಗಳಿಗೆ ₹2.16 ಕೋಟಿ ಹಾಗೂ ₹26.80 ಲಕ್ಷ ವೆಚ್ಚದಲ್ಲಿ 2680 ಫುಡ್ ಕಿಟ್‍ಗಳ ವಿತರಣೆ ಮಾಡಲಾಗಿದೆ. ಇಟ್ಟಮಡು ಗ್ರಾಮದಲ್ಲಿ ಮಳೆಯಿಂದಾಗಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ₹5 ಲಕ್ಷ, 5 ಕಾಳಜಿ ಕೇಂದ್ರಗಳಿಗೆ ₹5,83,280 ಮತ್ತು 74 ಮೃತಪಟ್ಟ ಜಾನುವಾರು ಮಾಲೀಕರಿಗೆ ತಲಾ 3 ಸಾವಿರದಂತೆ ₹2.22 ಲಕ್ಷ ಪರಿಹಾರ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.