ಮಾಗಡಿ: ಪಟ್ಟಣದ ಪುರಸಭೆಯಲ್ಲಿ ಮಂಗಳವಾರ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಉಚಿತ ಆಹಾರ ಕಿಟ್ ವಿತರಿಸಲಾಯಿತು.
‘ನಮ್ಮ ಭಾಗದ ನಗರ, ಪಟ್ಟಣಗಳು ಸ್ವಚ್ಛವಾಗಿ ಇದೆ ಎಂದರೆ ಅದರ ಹಿಂದಿನ ಪೌರಕಾರ್ಮಿಕರ ಶ್ರಮವನ್ನು ನಾವು ಸ್ಮರಿಸಬೇಕು. ಅವರು ಸ್ವಚ್ಛತೆ ಮಾಡುವುದರಿಂದ ನಮ್ಮ ಪರಿಸರ ಸುಂದರವಾಗಿ ಕಾಣಲು ಸಾಧ್ಯ. ಅವರು ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಪ್ರತಿದಿನವೂ ಊಟದ ಮೊದಲು ಸ್ವಚ್ಛವಾಗಿ ಕೈ ತೊಳೆಯಬೇಕು. ಏಕೆಂದರೆ ತಾವು ಮಾಡುವ ಕೆಲಸದಿಂದ ಬ್ಯಾಕ್ಟೀರಿಯಾಗಳು ತಮ್ಮ ಕೈಯಲ್ಲಿ ಇರುತ್ತದೆ. ಹಾಗಾಗಿ ಸಾಬೂನು ಅಥವಾ ಸ್ಯಾನಿಟೈಸರ್ ಮೂಲಕ ಸ್ವಚ್ಛಗೊಳಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು’ ಎಂದರು.
ಮುಂದಿನ ವರ್ಷ ಪೌರಕಾರ್ಮಿಕರ ದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಪೌರಕಾರ್ಮಿಕರು ಸ್ವಚ್ಛತೆಯ ರಾಯಭಾರಿಗಳಾಗಿದ್ದಾರೆ. ಪೌರಕಾರ್ಮಿಕರ ಹುದ್ದೆ ದೊಡ್ಡದಲ್ಲ, ಅವರ ಶ್ರಮ ದೊಡ್ಡದು. ಪೌರ ಕಾರ್ಮಿಕರ ದಿನಾಚರಣೆ ಶುಭಾಶಯಗಳು ಎಂದು ತಿಳಿಸಿದರು.
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಜಗನ್ನಾಥ್ ಗೌಡ, ಆನಂದ್ ಸ್ವಾಮಿ, ರಾಘವೇಂದ್ರ, ಪ್ರಸಾದ್ ಗೌಡ, ರಾಜೇಶ್, ಸ್ವಾಮಿ, ವೀರಭದ್ರಪ್ಪ, ಭಾಸ್ಕರ್ ಸೇರಿದಂತೆ ಪುರಸಭಾ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.