ADVERTISEMENT

ಮಾಗಡಿ: ಸಂಭ್ರಮದ ಸಾವನದುರ್ಗದ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 13:21 IST
Last Updated 8 ಫೆಬ್ರುವರಿ 2020, 13:21 IST

ಮಾಗಡಿ: ತಾಲ್ಲೂಕಿನ ಗಿರಿಧಾಮ ಸಾವನದುರ್ಗದ ಸಾವಂದಿ ವೀರಭದ್ರ ಸ್ವಾಮಿ ಜಾತ್ರೆಯ ಅಂಗವಾಗಿ ಶನಿವಾರ ಮಧ್ಯಾಹ್ನ 12 ಗಂಟೆಗೆ ಬ್ರಹ್ಮರಥೋತ್ಸವ ವೈಭವದಿಂದ ನಡೆಯಿತು. ಶಾಸಕ ಎ.ಮಂಜುನಾಥ ದೇವರಿಗೆ ಮೊದಲ ಪೂಜೆ ಸಲ್ಲಿಸಿ ಬೆಳ್ಳಿ ರಾಜದಂಡ ಹಿಡಿದು ಭಕ್ತಿ ಸಮರ್ಪಿಸಿದರು.

ಉತ್ಸವ ಮೂರ್ತಿಯನ್ನು ಅಲಂಕರಿಸಿ ಪೂಜಿಸಿದ ನಂತರ ಮಂಗಳವಾದ್ಯ ಸಹಿತ ವಿವಿಧ ಅರವಟಿಗೆಗಳಿಗೆ ಮೆರವಣಿಗೆಯಲ್ಲಿ ಕೊಂಡೊಯ್ದು ಪೂಜೆ ಸಲ್ಲಿಸಿದ ನಂತರ, ಹೂವಿನಿಂದ ಅಲಂಕೃತವಾಗಿದ್ದ ರಥದ ಮೇಲಿಟ್ಟರು. ಎ.ಮಂಜುನಾಥ, ತಹಶೀಲ್ದಾರ್‌ ಎನ್‌.ರಮೇಶ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಮ್ಮನಂಜಯ್ಯ ಪೂಜೆ ಸಲ್ಲಿಸಿದರು.

ಸಾವಂದಿ ವೀರಭದ್ರಸ್ವಾಮಿ ದಾಸೋಹ ಸಮಿತಿಯ ಪಿ.ವಿ.ನಾಗರಾಜ ಶೆಟ್ಟಿ, ಪಿ.ವಿ.ಗೋಪಾಲ ಶೆಟ್ಟಿ, ಪ್ರಭಾಕರ್‌ ಶೆಟ್ಟಿ, ಪೂಜೆ ಸಲ್ಲಿಸಿದರು. ಲೋಕೇಶ್‌ ಹಾಗೂ ಭಕ್ತರು ರಥಕ್ಕೆ ಪೂಜೆ ಸಲ್ಲಿಸಿ ಬೀದಿಯಲ್ಲಿ ಅದನ್ನು ಎಳೆದರು. ವಿವಿಧ ಜನಪದ ಕಲಾತಂಡಗಳು ಭಾಗವಹಿಸಿದ್ದವು. ನವದಂಪತಿಗಳು ರಥದ ಮೇಲೆ ಬಾಳೆಹಣ್ಣು ಧವನ ಎಸೆದು ಭಕ್ತಿ ಸಲ್ಲಿಸಿದರು.

ADVERTISEMENT

ರಾಜಸ್ವ ನಿರೀಕ್ಷಕ ರಮೇಶ್‌.ಸಿ, ಪಾರುಪತ್ತೇದಾರ ದೇವರಾಜು.ವಿ.ಎನ್, ವಿವಿಧ ಮುಜರಾಯಿ ದೇವಾಲಯಗಳ ಪಾರುಪತ್ತೇದಾರರಾದ ಸೋಮಶೇಖರ್‌.ಜಿ, ಗಂಗನರಸಿಂಹಯ್ಯ, ದರ್ಶನ್‌, ಮಹಂತೇಶ್‌, ಕೃಷ್ಣ, ಮಾಡಬಾಳ್‌ ಮಹದೇವಮ್ಮ ದೇವಾಲಯದ ಅರ್ಚಕ ವೀರಣ್ಣಗೌಡ, ಶುಭೋದಯ ಮಹೇಶ್‌, ತಿರುಮಲೆ ಮುಳಕಟ್ಟಮ್ಮದೇವಾಲಯದ ಅರ್ಚಕ ಶ್ರೀನಿವಾಸ್‌ ಹಾಗೂ ಸಸಹ್ರಾರು ಭಕ್ತರು ಇದ್ದರು. ಸಾವಂದಿ ವೀರಭದ್ರಸ್ವಾಮಿ ದೇವಾಲಯದ ಆಗಮಿಕ ಎನ್‌.ಲೋಕೇಶ ಆರಾಧ್ಯರು, ಎಸ್‌.ಎಲ್‌.ರೇಣುಕಾ ಪ್ರಸಾದ್‌, ಎಸ್.ರೇಣುಕಾರಾಧ್ಯ, ಎಸ್‌.ಮೃತ್ಯುಂಜಯರಾಧ್ಯರು ಸಹೋದರರು ಪೂಜಾದಿಗಳನ್ನು ನೆರವೇರಿಸಿದರು.

ರಥೋತ್ಸವದಲ್ಲಿ ಭಾಗವಹಿಸಿದ್ದ ಸಹಸ್ರಾರು ಭಕ್ತರು ಸಾಲಾಗಿ ನಿಂತು ಮೂಲ ದೇವರ ದರ್ಶನ ಪಡೆದರು. ಪಿ.ವಿ.ಗೋಪಾಲ ಶೆಟ್ಟಿ ಕುಟುಂಬದವರು ಭಕ್ತರೆಲ್ಲರಿಗೂ ಸಿಹಿಲಾಡು ವಿತರಿಸಿ, ಉಚಿತ ದಾಸೋಹ ಏರ್ಪಡಿಸಿದ್ದರು. ರಾಮನಗರದ ಕೆ.ವಿ.ಪುಟ್ಟರುದ್ರಯ್ಯ ಶೆಟ್ಟಿ. ವೀರಭದ್ರಶೆಟ್ಟಿ, ಗೋಪಾಲಶೆಟ್ಟಿ ಮತ್ತು ಜಯಪ್ರದ ತಂಡದವರು ಸಾಮೂಹಿಕ ಭೋಜನ ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.