ADVERTISEMENT

ಗ್ರಾಮೀಣ ಕಲೆ, ಸಂಸ್ಕೃತಿ ಉಳಿಸಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 13:49 IST
Last Updated 25 ಅಕ್ಟೋಬರ್ 2019, 13:49 IST
ಹಾರೋಹಳ್ಳಿ ಸರ್ಕಾರಿ ಕಾಲೇಜಿನಲ್ಲಿ ನಡೆದ ಜಾನಪದ ಕಲೋತ್ಸವದಲ್ಲಿ ತಮಟೆ ವಾದವನ್ನು ನುಡಿಸುತ್ತಿರುವುದು
ಹಾರೋಹಳ್ಳಿ ಸರ್ಕಾರಿ ಕಾಲೇಜಿನಲ್ಲಿ ನಡೆದ ಜಾನಪದ ಕಲೋತ್ಸವದಲ್ಲಿ ತಮಟೆ ವಾದವನ್ನು ನುಡಿಸುತ್ತಿರುವುದು   

ಹಾರೋಹಳ್ಳಿ (ಕನಕಪುರ): ಜಾನಪದ ಕಲೆಗಳಲ್ಲಿ ಗ್ರಾಮೀಣ ಸೊಗಡು, ವೈವಿಧ್ಯತೆ ಇರುತ್ತದೆ. ಭಾವನೆಗಳನ್ನು ಒಳಗೊಂಡಿರುವ ನಮ್ಮ ಈ ಗ್ರಾಮೀಣ ಸಂಸ್ಕೃತಿಯನ್ನು ಯುವಕರು ಬೆಳೆಸಿಕೊಂಡು ಹೋಗಬೇಕು ಎಂದು ಉತ್ತೇಜನ ಫೌಂಡೇಷನ್‌ ಅಧ್ಯಕ್ಷ, ಜೆಡಿಎಸ್‌ನ ಯುವ ಮುಖಂಡ ಎಂ.ಗೌತಮ್‌ಗೌಡ ಹೇಳಿದರು.

ಇಲ್ಲಿನ ಹಾರೋಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆರುಂಧತಿ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್‌ನ ವತಿಯಿಂದ ಆಯೋಜನೆ ಮಾಡಿದ್ದ ಜಾನಪದ ಕಲೋತ್ಸವ 2019 ಉದ್ಘಾಟಿಸಿ ಅವರು ಮಾತನಾಡಿದರು.

ಅರುಣಾಚಲೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಮಲ್ಲಪ್ಪ ಮಾತನಾಡಿ, ‘ಜಾನಪದದಲ್ಲಿ ನೂರಾರು ಪ್ರಕಾರಗಳಿವೆವೆ. ಆದರೆ ಅವುಗಳಲ್ಲಿ ಕೆಲವು ಮಾತ್ರ ಬಳಕೆಯಲ್ಲಿದ್ದು ಉಳಿದವುಗಳು ನಮ್ಮಿಂದ ಕಣ್ಮರೆಯಾಗುತ್ತಿವೆ. ನಮ್ಮ ಜೀವನದ ಭಾಗವಾಗಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಹೇಳಿದರು.

ADVERTISEMENT

ಹಾರೋಹಳ್ಳಿ ರೋಟರಿ ಮಾಜಿ ಅಧ್ಯಕ್ಷ ಮಹಮ್ಮದ್‌ ಏಜಾಸ್‌, ಬಾಪು ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮಹಮ್ಮದ್‌ ಯಾಕುಬ್‌ ಪಾಷ, ಜೆಡಿಎಸ್‌ ಮುಖಂಡ ಸೋಮಣ್ಣ, ಉಪನ್ಯಾಸಕರಾದ ಡಾ.ಎಚ್‌.ಪಿ.ರಮೇಶ್‌, ಎಸ್‌.ನಾಗರಾಜು, ಸಿ.ಕೆ.ರಾಜು ಟ್ರಸ್ಟ್‌ನ ಕಾರ್ಯದರ್ಶಿ ಶಂಕರಮ್ಮಉಪಸ್ಥಿತರಿದ್ದರು.

ಹೊನ್ನಾಯಕನಹಳ್ಳಿ ಮರಿಸ್ವಾಮಿ ಮತ್ತು ತಂಡ ತಮಟೆ ವಾದನ, ಕುಮಾರ್‌ ಮತ್ತು ತಂಡ ಪೂಜಾ ಕುಣಿತ, ಸಂದೀಪ್‌ ಮತ್ತು ತಂಡ ಪಟದ ಕುಣಿತ, ಅನಿಲ್‌ ಮತ್ತು ತಮಡ ಗಾರುಡಿ ಗೊಂಬೆ ಕುಣಿತ, ರವಿ ಮತ್ತು ತಂಡ ವೀರಗಾಸೆ ನೃತ್ಯ, ಹೊಳಸಾಲಯ್ಯ ಮತ್ತು ತಂಡ ಜಾನಪದ ಗಾಯನ, ಜಯರತ್ನಮ್ಮ ತಂಡ ಸೋಬಾನೆ ಪದ, ನಂಜಮ್ಮ ಮತ್ತು ತಂಡ ಭಕ್ತಿಗೀತೆ ಗಾಯನ, ಯಶಸ್ವಿನಿ ಮತ್ತು ತಂಡ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.